ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲೇಜು ಪಠ್ಯದಲ್ಲಿ ಮಾಹಿತಿ ಹಕ್ಕು ಸೇರ್ಪಡೆ ಸಾಧ್ಯತೆ

By Srinath
|
Google Oneindia Kannada News

RTI to be taught in Karnataka collages
ಮಂಗಳೂರು, ಆ.05: ಶಿಕ್ಷಣದಲ್ಲಿ ಮಾಹಿತಿ ಹಕ್ಕು ವಿಷಯವನ್ನು ಪಠ್ಯವಾಗಿ ಸೇರ್ಪಡೆಗೊಳಿಸುವ ಪ್ರಸ್ತಾವವನ್ನು ಸರಕಾರದ ಮುಂದಿದೆ ಎಂದು ಮಾಹಿತಿ ಹಕ್ಕು ಆಯೋಗದ ಆಯುಕ್ತ ಡಾ. ಎಚ್ಎನ್‌ ಕೃಷ್ಣ ತಿಳಿಸಿದ್ದಾರೆ.

ಮಾಹಿತಿ ಕೋರಿ ಸಲ್ಲಿಕೆಯಾದ ಅರ್ಜಿಗಳ ಬಗ್ಗೆ ಆಯೋಗಕ್ಕೆ ಬಂದ ದೂರುಗಳ ವಿಚಾರಣೆಯ ಬಳಿಕ ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಹಿತಿ ಹಕ್ಕುಗಳ ಬಗ್ಗೆ ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಈ ಹಿಂದೆಯೇ ಸರಕಾರಕ್ಕೆ ಸಲ್ಲಿಸಲಾಗಿದೆ.

ಕೇವಲ ಅಧ್ಯಯನಕ್ಕಾಗಿ ಪಠ್ಯಪುಸ್ತಕದಲ್ಲಿ ಒಂದು ವಿಷಯವಾಗಿ ಮಾತ್ರ ಅಳವಡಿಸುವ ಹಾಗೂ ಪರೀಕ್ಷೆಯಿಂದ ಇದನ್ನು ಹೊರಗಿಡುವ ಉದ್ದೇಶವಿದೆ. ಪಿಯುಸಿ ಅಥವಾ ಪದವಿ ತರಗತಿಗಳ ಪಠ್ಯದಲ್ಲಿ ಇದನ್ನು ಸೇರ್ಪಡೆಗೊಳಿಸುವುದು ಹೆಚ್ಚು ಸೂಕ್ತ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.

2009-10ನೇ ಸಾಲಿನಲ್ಲಿ ಆಯೋಗಕ್ಕೆ ಸುಮಾರು 14,000 ಅರ್ಜಿಗಳು ಸಲ್ಲಿಕೆಯಾಗಿತ್ತು. ಪೌರಾಡಳಿತ ಸಂಸ್ಥೆಗಳು, ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ಸಂಬಂಧಪಟ್ಟಂತೆ ಹೆಚ್ಚು ಅರ್ಜಿಗಳು ಬರುತ್ತಿವೆ. ಮಾಹಿತಿ ಹಕ್ಕು ಕಾಯ್ದೆ ಒಂದು ಕ್ರಾಂತಿಕಾರಿ ಕಾಯ್ದೆಯಾಗಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದೆ ಎಂದರು.

ಮಾಹಿತಿ ಹಕ್ಕಿನಡಿ ದೂರು ಸಲ್ಲಿಸಿದವರ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರಗಳಿಗೆ ತೆರಳಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ವೀಡಿಯೋ ಕಾನ್ಫರೆನ್ಸ್‌ ಮೂಲಕವೂ ಪ್ರತಿ ಎರಡು ತಿಂಗಳಿಗೊಮ್ಮು ಅಹವಾಲು ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ ಎಂದವರು ತಿಳಿಸಿದರು ಎಂದು ಮತ್ತೊಬ್ಬ ಆಯುಕ್ತ ಜೆ.ಎಸ್‌. ವಿರೂಪಾಕ್ಷಯ್ಯ ಅವರು ತಿಳಿಸಿದರು. ಇಂದೂ (ಶುಕ್ರವಾರ) ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯುಕ್ತರಿಂದ ದೂರುಗಳ ವಿಲೇವಾರಿ ಕಾರ್ಯ ನಡೆಯಲಿದೆ.

English summary
The Right to Information Act, 2005, may soon be part of the curriculum in schools and colleges in the State. Stating that a proposal to this effect was before the Government, Information Commissioner H.N. Krishna said here on Thursday (Aug 4) that discussions had already been held by a high-level committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X