ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ ಪಿಜಿ ಗೊಂದಲ, ಆಹಾರ ಇಲಾಖೆ ವಿರುದ್ಧ ಕೇಸ್ ಹಾಕುವೆ

By Mahesh
|
Google Oneindia Kannada News

LPG Connection Chaos in Mysore
ಮೈಸೂರು ಆ. 5: ಅಹಾರ ಮತ್ತು ನಾಗರಿಕೆ ಸೌಲಭ್ಯ ಪೂರೈಕೆ ಇಲಾಖೆ ಮಾಡಿರುವ ಅವಾಂತರದಿಂದ ಅಡುಗೆ ಅನಿಲ ಗ್ರಾಹಕರು ಸಾಕಷ್ಟು ನೊಂದಿದ್ದಾರೆ. ಸರ್ಕಾರ ಈ ಕೂಡಲೇ ದಾಖಲೆ ಸಲ್ಲಿಕೆ ಕಾರ್ಯವನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ, ಅಡ್ವೋಕೇಟ್ ವೇಣು ಗೋಪಾಲ್ ಹೇಳಿದ್ದಾರೆ.

ಅವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಗ್ರಾಹಕರಿಗೆ ಇಲಾಖೆ ತೊಂದರೆ ಕೊಡುತ್ತಿದೆ. ಗ್ಯಾಸ್ ಕನೆಕ್ಷನ್ ಸಸ್ಪೆಂಡ್ ಆಗಿದೆ ಎಂದು ತಿಳಿದು ಎಲ್ಲರೂ ಅಪರಾಧಿ ಮನೋಭಾವಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಅಹಾರ ಇಲಾಖೆ ತಕ್ಷಣವೇ ಈ ದಾಖಲಾತಿ ಸಲ್ಲಿಕೆ ಕಾರ್ಯಕ್ಕೆ ಮುಕ್ತಾಯ ಹಾಡಬೇಕು ಎಂದು ವೇಣು ಗೋಪಾಲ್ ಆಗ್ರಹಿಸಿದ್ದಾರೆ.

ದೇಶದ ಎಲ್ಲಾ ನಾಗರಿಕರಿಗೆ ಇನ್ನೂ ಆಧಾರ್ ಚೀಟಿ ಸಿಕ್ಕಿಲ್ಲ. ಎಲೆಕ್ಟ್ರಿಸಿಟಿ ಮೀಟರ್ ನಂಬರ್(RR ನಂಬರ್) ಅನ್ನು ಮನೆ ವಿಳಾಸಕ್ಕೆ ಜೋಡಿಸುವುದು ಅವೈಜ್ಞಾನಿಕ. ಮೈಸೂರಿನಲ್ಲಿ ಗ್ಯಾಸ್ ಗೊಂದಲಕ್ಕೆ ಈಡಾಗಿ ಶೇ 45 ರಷ್ಟು ಮಂದಿ ಗೊಂದಲದಲ್ಲಿದ್ದಾರೆ. ಇಲಾಖೆ ಅಥವಾ ಸರ್ಕಾರ ತಕ್ಷಣವೇ ಈ ಬಗ್ಗೆ ಗಮನಹರಿಸಬೇಕು ಎಂದು ವೇಣುಗೋಪಾಲ್ ಹೇಳಿದರು.

English summary
LPG Connection Chaos in Mysore: Social Activist, Advocate Venugopal has said he will file a PIL against KSFCS Department and ask to withhold LPG document submission process
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X