ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಗಣಿಗಾರಿಕೆ ನಿಷೇಧ ಉಕ್ಕು ಉತ್ಪಾದನೆಗೆ ತೊಡಕು

By * ಇಂದ್ರೇಶ್
|
Google Oneindia Kannada News

Illegal Mining Ban Impact on Bellary
ಬೆಂಗಳೂರು ಆ.5; ಸುಪ್ರೀಂ ಕೋರ್ಟು ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆಗೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ದೇಶದ ಅರ್ದ ಡಜನ್ ಗೂ ಅಧಿಕ ಉಕ್ಕು ತಯಾರಿಕಾ ಕಂಪೆನಿಗಳಿಗೆ ತೊಂದರೆಯಾಗಿದೆ. ಈ ನಿಷೇಧದಿಂದ ದೇಶದಲ್ಲಿ ಕಬ್ಬಿಣದ ಅದಿರಿನ ದರ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ಒಟ್ಟು ಉಕ್ಕು ಉತ್ಪಾದನೆಯಲ್ಲಿ ಶೇ.21 ರಷ್ಟು ಪಾಲು ಹೊಂದಿರುವ ಜೆಎಸ್‌ಡ್ಬ್ಲಯೂ ಸ್ಟೀಲ್ ಹಾಗೂ ಕಲ್ಯಾಣಿ ಸ್ಟೀಲ್ಸ್ ಕಂಪೆನಿಗಳಿಗೆ ತೀವ್ರ ಹಿನ್ನಡೆ ಆಗಿದ್ದು ಇವೆರಡೂ ಕಂಪೆನಿಗಳು ವಾರ್ಷಿಕ 14 ಮಿಲಿಯನ್ ಟನ್ ಗಳಷ್ಟು ಉಕ್ಕು ಉತ್ಪಾದಿಸುತ್ತಿವೆ.

ಬಳ್ಳಾರಿ ಹಾಗೂ ಹೊಸಪೇಟೆ ಪ್ರಾಂತ್ಯದ ಉಕ್ಕು ತಯಾರಿಕಾ ಕಂಪೆನಿಗಳು ದೇಶದ ಉಕ್ಕು ಉತ್ಪಾದನೆಯಲ್ಲಿ ಶೇ.25 ರಷ್ಟು ಪಾಲು ಹೊಂದಿದ್ದು ತೀರ್ಪಿನ ಹಿನ್ನೆಲೆಯಲ್ಲಿ ಇತರ ಪ್ರದೇಶಗಳಿಂದ ಅದಿರನ್ನು ಪಡೆಯಲು ಮುಂದಾಗಿವೆ.

ರಾಜ್ಯ ದೇಶದ ಉಕ್ಕು ಉತ್ಪಾದನೆಯಲ್ಲಿ 5ನೇ ಒಂದು ಭಾಗದಷ್ಟು ಪಾಲನ್ನು ಹೊಂದಿದ್ದು ದೇಶದಲ್ಲಿ ಒಟ್ಟು ವಾರ್ಷಿಕ 218 ಮಿಲಿಯನ್ ಟನ್ ಗಳಷ್ಟು ಉಕ್ಕನ್ನು ಉತ್ಪಾದಿಸಲಾಗುತ್ತಿದೆ. ದಕ್ಷಿಣ ಭಾsರತದ ಶೇ.80 ರಷ್ಟು ಖನಿಜ ಉತ್ಪಾದನೆಯಲ್ಲಿ ಬಳ್ಳಾರಿ ಹೊಸಪೇಟೆ ಯ ಪಾಲು 45 ಮಿಲಿಯನ್ ಟನ್ ಗಳಷ್ಟಾಗಿದೆ.

ಇದರಲ್ಲಿ 25 ಮಿಲಿಯನ್ ಟನ್ ಗಳಷ್ಟು ಅದಿರನ್ನು ಬಳ್ಳಾರಿಯ ವಿಜಯನಗರ, ಜೆಎಸ್‌ಡಬ್ಲ್ಯೂ, ಕಲ್ಯಾಣಿ ಕಂಪೆನಿಗಳು ಬಳಸುತ್ತಿದೆ. ಇವುಗಳ ನಾಲ್ಕು ಉತ್ಪಾದನಾ ಘಟಕಗಳು ವಾರ್ಷಿಕ 14 ಮಿಲಿಯನ್ ಟನ್ ಗಳಷ್ಟು ಉಕ್ಕನ್ನು ಉತ್ಪಾದಿಸುತ್ತಿದ್ದು, ಇದಕ್ಕಾಗಿ 25 ಮಿಲಿಯನ್ ಟನ್ ಗಳಷ್ಟು ಅದಿರನ್ನು ಬಳಸಿಕೊಳ್ಳುತ್ತಿವೆ.

ಜೆಎಸ್‌ಡ್ಲ್ಯೂ ತನ್ನ ವಿಜಯನಗರ ಘಟಕಕ್ಕೆ ಶೇ 50 ರಷ್ಟು ಅದಿರನ್ನು ಬಳ್ಳಾರಿಯಿಂದ, ಶೇ 30ರಷ್ಟನ್ನು ಚಿತ್ರದುರ್ಗದಿಂದ ಹಾಗೂ ಶೇ 20 ರಷ್ಟನ್ನು ಹೊರರಾಜ್ಯದಿಂದ ಖರೀದಿಸುತ್ತಿದೆ. ವಿಜಯನಗರ ಘಟಕ ಜೆಎಸ್‌ಡ್ಲ್ಯೂ ಸ್ಟೀಲ್ ನ ಶೇ 70 ರಷ್ಟು ಉಕ್ಕು ಉತ್ಪಾದನೆಯನ್ನು ಹೊಂದಿದ್ದು ನಿಷೇಧದಿಂದ ತೀವ್ರ ತೊಂದರೆಗೀಡಾಗಿದ್ದು ಇದೀಗ ಚತ್ತೀಸ್ ಘಡ, ಗೋವ, ಬಿಹಾರದಿಂದ ಅದಿರು ಪಡೆಯಲು ಮುಂದಾಗಿದೆ.

ನಿಷೇಧದಿಂದ ಶಾತವಾಹನ ಇಸ್ಪಾತ್, ಕಿರ್ಲೋಸ್ಕರ್ ಫೆರ್ರೋಸ್, ಉನಿಮೆಟಲ್ ಇಸ್ಪಾತ್, ಸಂಡೂರ್ ಮ್ಯಾಂಗನೀಸ್ ಅಂಡ್ ಐರನ್ ಓರ್ ,ಹಾಗೂ ಸಂಡೂರ್ ಲ್ಯಾಮಿನೇಟ್ಸ್ ಗಳಿಗೂ ತೊಂದರೆ ಆಗಿದೆ.

ಕಲ್ಯಾಣಿ ಸ್ಟೀಲ್ಸ್ ತನ್ನ ಉತ್ಪಾದನೆಯನ್ನು ಟಾಟಾ ಮೋಟಾರ್‍ಸ್, ಮಹೀಂದ್ರಾ ಹಾಗೂ ಮಾರುತಿ ಸುಜುಕಿ ಕಂಪೆನಿಗಳಿಗೆ ಸರಬರಾಜು ಮಾಡುತ್ತಿದೆ. ಈ ನಿಷೇಧದಿಂದ ದೇಶದಲ್ಲಿ ಕಬ್ಬಿಣದ ಅದಿರಿನ ದರ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

English summary
JSW Steel and Kalyani Steels manufacturing about 14 million tonne steel have been hit by the Supreme Court ban on iron ore mining in the Bellary district that produces 21 per cent of country's iron ore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X