ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ದೇಶ ತಿಪ್ಪೆಗುಂಡಿ ಎಂದ ರೇಡಿಯೋ ಜಾಕಿ

By Mahesh
|
Google Oneindia Kannada News

Australian radio host Kyle Sandilands
ಮೆಲ್ಬರ್ನ್ ಆ.2: ಆಸ್ಟ್ರೇಲಿಯಾದ ರೇಡಿಯೋ ಜಾಕಿ ಕೈಲ್‌ ಸ್ಯಾಂಡಿಲ್ಯಾಂಡ್‌ ಭಾರತ ಹಾಗೂ ಪವಿತ್ರ ನದಿ ಗಂಗೆಯನ್ನು ತುಚ್ಚ ಶಬ್ದಗಳಿಂದ ಬೈಯ್ದು ಹೀಯಾಳಿಸಿದ್ದಾನೆ. ಭಾರತ ಎಂಬುದು ಶೌಚ ಗುಂಡಿ. ಮಲ ವಿಸರ್ಜನೆಯ ತಾಣ, ಗಂಗಾ ನದಿ ಕಸದ ತೊಟ್ಟಿ ತಿಪ್ಪೆಗುಂಡಿ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾನೆ.

ರೇಡಿಯೋ ನಿರೂಪಕ ಕೈಲ್‌ ಸ್ಯಾಂಡಿಲ್ಯಾಂಡ್‌ನ‌ ಈ ಹೇಳಿಕೆ ವಿರುದ್ಧ ಆಸ್ಟ್ರೇಲಿಯಾದ ಭಾರತಯ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ತಕ್ಷಣವೇ ಸ್ಯಾಂಡಿಲ್ಯಾಂಡ್‌ ಕ್ಷಮೆ ಯಾಚಿಸಬೇಕು ಎಂದು ಸಿಡ್ನಿ ಮೂಲದ ಸಂಘಟನೆ ಆಗ್ರಹಿಸಿದೆ.

'ಕ್ಯಾಲ್ ಅಂಡ್ ಜಾಕಿ ಒ' ಎಂಬ ಕಾರ್ಯಕ್ರಮದಲ್ಲಿ ಹಿಂದುಗಳ ಪವಿತ್ರ ನದಿಯನ್ನು ಟೀಕಿಸಿದ್ದಷ್ಟೇ ಅಲ್ಲದೆ, ಹಿಂದೂ ಧರ್ಮದ ಅನುಯಾಯಿಗಳ ಬಗ್ಗೆ ಕೈಲ್‌ ಲೇವಡಿ ಮಾಡಿದ್ದಾನೆ ಎಂದು ಮಂಡಳಿಯ ಅಧ್ಯಕ್ಷ ಯಾದು ಸಿಂಗ್‌ ತಿಳಿಸಿದ್ದಾರೆ.

ಭಾರತೀಯ ಸಮುದಾಯದ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಆಸ್ಟ್ರೇಲಿಯಾದ ಮಾಧ್ಯಮ ನಿಯಂತ್ರಣ ಪ್ರಾಧಿಕಾರಕ್ಕೆ ಪತ್ರ ಬರೆದು ರೇಡಿಯೋ ಲೈಸನ್ಸ್ ರದ್ದು ಪಡಿಸಲು ಆಗ್ರಹಿಸುವುದಾಗಿ ಕೌನ್ಸಿಲ್ ಆಫ್ ಇಂಡಿಯನ್ ಆಸ್ಟ್ರೇಲಿಯನ್ಸ್(ಸಿಐಎ) ಹೇಳಿದೆ.

English summary
An Australian radio host Kyle Sandilands is under fire from the Indian community after he passed disparaging comments on India and Hinduism, calling river Ganga a 'junkyard'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X