ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಆಶ್ರಮದಿಂದ 7 ಬಾಂಗ್ಲಾ ಹುಡುಗಿಯರು ಪರಾರಿ

By Prasad
|
Google Oneindia Kannada News

7 Bangladesh girls run away
ಮಂಡ್ಯ, ಆ. 2 : ವೇಶ್ಯಾವಾಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಯಾಗಿದ್ದ ಬಾಂಗ್ಲಾದೇಶದ 7 ಮಹಿಳೆಯರು, ಅವರನ್ನು ಇರಿಸಲಾಗಿದ್ದ ಆಶ್ರಮದಿಂದ ಪರಾರಿಯಾದ ಘಟನೆ ಮಂಗಳವಾರ ನಸುಕಿನಲ್ಲಿ ಶ್ರೀರಂಗಪಟ್ಟಣದಲ್ಲಿ ಜರುಗಿದೆ.

ಕೆಲ ತಿಂಗಳ ಹಿಂದೆ ಅವರನ್ನು ರಸ್ತೆಬದಿಯ ಢಾಬಾವೊಂದರಲ್ಲಿ ಬಂಧಿಸಲಾಗಿತ್ತು. ಅವರನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ನವ ಜೀವನ ಆಶ್ರಯ ಧಾಮದಲ್ಲಿ ಇರಿಸಲಾಗಿತ್ತು.

ಮೊದಲ ಮಹಡಿಯ ಕಿಟಕಿಯ ಗ್ರಿಲ್ ಗಳನ್ನು ತೆಗೆದು, ಸೀರೆಯ ಸಹಾಯದಿಂದ ಕೆಳಗಿಳಿದು ಪರಾರಿಯಾಗಿದ್ದಾರೆ. ಪರಾರಿಯಾದವರ ಹೆಸರುಗಳು ಸಂಜನಾ ರಥಾರು, ಪಿಂಕಿ, ಸರಿತಾ, ಪನ್ನಾ, ಕಾಜಲ್, ಹಸೀನಾ ಮತ್ತು ವೀಥಾ ಎಂದು ಪೊಲೀಸರು ತಿಳಿಸಿದ್ದಾರೆ.

ಆಶ್ರಯ ಧಾಮಕ್ಕೆ ಭೇಟಿ ನೀಡಿದ ಪೊಲೀಸ್ ಸುಪರಿಂಟೆಂಡ್ ಕುಶಾಲಿಂದರ ಕುಮಾರ್ ಅವರು ತನಿಖೆ ನಡೆಸುತ್ತಿದ್ದಾರೆ. ಹುಡುಗಿಯರನ್ನು ಬಂಧಿಸಲು ವ್ಯಾಪಕ ಜಾಲ ಬೀಸಲಾಗಿದೆ. ಸದ್ಯದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

English summary
7 Bangladeshi girls arrested for their involvement in prostitution have escaped from Nava Jeevana Ashraya Dhama in Srirangapattana in Mandya district. They were arrested few months ago on a road side dhaba.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X