ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಕಬಳಿಕೆ ಪ್ರಕರಣ: ಡಿಎಂಕೆ ಶಾಸಕ ಅನ್ಬಳಗನ್ ಬಂಧನ

By Srinath
|
Google Oneindia Kannada News

DMK MLA held on land grabbing charges
ಚೆನ್ನೈ, ಜುಲೈ 30: ನೆರೆಯ ತಮಿಳುನಾಡಿನಲ್ಲಿ ಜಯಲಲಿತಾ ವಿಜೃಂಭಿಸಲಾರಂಭಿಸಿದ್ದಾರೆ. ಭೂಕಬಳಿಕೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ಬಂಧನಗಳ ಪರ್ವ ಶುರುವಾಗಿಸಿದ್ದಾರೆ. ನಮ್ಮಲ್ಲೂ ಭೂಕಬಳಿಕೆ ಅವ್ಯಾಹತವಾಗಿದೆ. ಜತೆಗೆ ಅಧಿಕಾರವೂ ಬದಲಾಗುತ್ತಿದೆ. ನೋಡೋಣ ಏನಾಗುತ್ತದೋ.

ಇಂದು ಬೆಳ್ಳಬೆಳಗ್ಗೆ ಏನಾಯಿತೆಂದರೆ ಡಿಎಂಕೆ ಶಾಸಕ ಜೆ. ಅನ್ಬಳಗನ್ ಅವರನ್ನು ಭೂಕಬಳಿಕೆ ಆರೋಪದಡಿ ಜಯರಾಂ ಜಯಲಲಿತಾ ಪೊಲೀಸರು ಬಂಧಿಸಿದ್ದಾರೆ. ನಗರದ ಪ್ರತಿಷ್ಠಿತ ಚೆಪಾಕ್ ಕ್ಷೇತ್ರದ ಶಾಸಕ ಅನ್ಬಳಗನ್ ಗೆ ತಿರುಪ್ಪೂರ್ ಪೊಲೀಸರು ಅವರ ನಿವಾಸದಲ್ಲೇ ಕೈಗೆ ಕೋಳ ತೊಡಿಸಿದ್ದಾರೆ. ಅನ್ಬಳಗನ್, ಡಿಎಂಕೆ ದಕ್ಷಿಣ ಚೆನ್ನೈನ ಜಿಲ್ಲಾ ಕಾರ್ಯದರ್ಶಿ.

ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಿಂದ ಕೆಳಗಿಳಿದ ಬಳಿಕ ಭೂಕಬಳಿಕೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಇತರರೆಂದರೆ ಮಾಜಿ ಸಚಿವರಾದ ವೀರಪಾಂಡಿ ಆರ್ಮುಗಂ ಮತ್ತು ಕೆ. ಎನ್. ನೆಹ್ರು. ಜತೆಗೆ ಕೇಂದ್ರ ಸಚಿವ ಅಳಗಿರಿಯ ಅನೇಕ ಬಂಟರು ಈಗಾಗಲೇ ಕಂಬಿ ಎಣಿಸುತ್ತಿದ್ದಾರೆ.

English summary
DMK MLA J Anbazhagan was on Saturday (July 30) arrested on land grabbing charges. Anbazhagan, representing Chepauk constituency in chennai, was arrested by a Tirupur police team from his house here, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X