ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿಗೆ ಉಡುಪಿ, ಸುತ್ತೂರು ಸ್ವಾಮೀಜಿಗಳ ಶ್ರೀರಕ್ಷೆ ಇನ್ನಿಲ್ಲ

By Mahesh
|
Google Oneindia Kannada News

Suttur and Udupi Seer
ಬೆಂಗಳೂರು ಜು 29: ಮುಖ್ಯಮಂತ್ರಿ ಬಿಎಸ್ ಯುಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್ ಕೈಗೊಂಡ ತೀರ್ಮಾನವನ್ನು ಪಾಲಿಸಬೇಕು. ಹಠಮಾರಿತನದಿಂದ ಯಾರಿಗೂ ನೆಮ್ಮದಿ ಇಲ್ಲ. ಸಂಕಷ್ಟ ಬಂದಾಗ ದೇವರ ಮೊರೆ ಹೋಗುವುದು ಸಹಜ. ಯಡಿಯೂರಪ್ಪ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದು ಉಡುಪಿ ಪೇಜಾವರಶ್ರೀಗಳು ಹೇಳಿದ್ದಾರೆ.

ಯುಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದಾಗ ಸಲಹೆ, ಸೂಚನೆ ನೀಡಿ ಕೈ ಹಿಡಿದು ಮೇಲಕ್ಕೆ ಎತ್ತುತ್ತಿದ್ದ ಉಡುಪಿಯ ಶ್ರೀಮಠ ಕೂಡಾ ಈಗ ಬೇರೆ ರಾಗ ಹಾಡುತ್ತಿದೆ. ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಚಾತುರ್ಮಾಸ ವ್ರತಕ್ಕೆ ಅಣಿಯಾಗುತ್ತಿದ್ದು, ಅದಕ್ಕೂ ಮುನ್ನ ಯಡಿಯೂರಪ್ಪ ಅವರಿಗೆ ಕುರ್ಚಿ ಆಸೆ ಬಿಡುವಂತೆ ಸೂಚಿಸಿದ್ದಾರೆ.

ಸೂತ್ತೂರು ಶ್ರ್ರೀಗಳ ಹೇಳಿಕೆ :ವ್ಯಕ್ತಿಗಿಂತ ರಾಷ್ಟ್ರ ಹಾಗೂ ರಾಜ್ಯದ ಹಿತವೇ ಮುಖ್ಯ, ಯಡಿಯೂರಪ್ಪ ಅವರು ವೀರಶೈವರ ಘನತೆ ಉಳಿಸಬೇಕು. ಸಿಎಂ ಪದವಿ ತೊರೆಯುವುದು ಉತ್ತಮ ಎಂದು ಸುತ್ತೂರು ಶ್ರೀಗಳು ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷ ಬಿಜೆಪಿಗೆ ಸಂದಿಗ್ಧ ಪರಿಸ್ಥಿತಿ ನಿಭಾಯಿಸುವುದು ಗೊತ್ತಿದೆ. ನಾವು ಸಲಹೆ ನೀಡುವ ಅವಶ್ಯಕತೆ ಇಲ್ಲ. ಲೋಕ ಕಲ್ಯಾಣಾರ್ಥವಾಗಿ ಹೇಳುವುದಾದರೆ ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಇತರರಿಗೆ ಅವಕಾಶ ನೀಡಬೇಕು ಎಂದಿದ್ದಾರೆ.

ಈ ನಡುವೆ ವೀರಶೈವ ಸಮುದಾಯದವರಿಗೆ ಸಿಎಂ ಪಟ್ಟನೀಡಬೇಕು ಎಂದು ಹುಬ್ಬಳಿಯ ಮೂರು ಸಾವಿರ ಮಠಾಧೀಶರು ಸೇರಿದಂತೆ ಉತ್ತರ ಕರ್ನಾಟಕದ ಹಲವು ವೀರಶೈವ ಸ್ವಾಮೀಜಿಗಳು ಆಗ್ರಹಿಸಿದ್ದಾರೆ. ಜಗದೀಶ್ ಶೆಟ್ಟರ್ ಉತ್ತಮ ನಾಯಕ ಅವರು ಮುಖ್ಯಮಂತ್ರಿ ಆಗುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

ಯಡಿಯೂರಪ್ಪ ಅವರ ತಲೆ ಕಾಯ್ದು ಕಾಪಾಡಿಕೊಂಡೂ ಬಂದಿರುವ ಸಿದ್ಧಗಂಗಾ ಮಠದ ಶ್ರೀಗಳು ಮಾತ್ರ ರಾಜಜೀಯ ಬೆಳವಣಿಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಆರೋಪ ಹೊತ್ತ ಸಚಿವ ಸೋಮಣ್ಣ ಮಾತ್ರ ಸಿದ್ದಗಂಗೆಗೆ ಭೇಟಿ ನೀಡಿದ್ದು.

English summary
Udupi Seer Vishveshwathirtha Swamiji who is on going Chaturmas vrat from today said Yeddyurappa must accept the fault and step down. Suttur Seer also advised Cm BSY that for the well fare of Veerashaiva community Yeddyurappa should resign
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X