ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಮೂಲೆ ಮೂಲೆಗೂ ಕೇಳಲಿದೆ ಎಫ್ಎಂ ರೇಡಿಯೊ

By Srinath
|
Google Oneindia Kannada News

FM Radios in Karnataka districts
ನವದೆಹಲಿ ಜು 28 : ಒಂದೆಡೆ ಲೋಕಾಯುಕ್ತ, ಸ್ಪೆಕ್ಟ್ರಂ ತರಂಗಗಳು ಕಂಪಿಸುತ್ತಿರಬೇಕಾದರೆ, ಇನ್ನೊಂದು ಕಡೆ ಎಫ್ಎಂ ರೇಡಿಯೋ ಸ್ಟೇಷನ್ ಗಳ ತರಂಗಗಳು ಸಕತ್ ಹಾಟ್ ಆಗಿ ರಾಜ್ಯದೆಲ್ಲಡೆ ಪಸರಿಸುತ್ತಿವೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದ ಎಫ್ಎಂ ರೇಡಿಯೋ ಜ್ವರ ಜಿಲ್ಲಾ ಕೇಂದ್ರಕ್ಕೂ ಹರಡಲಿದೆ. ಕೇಂದ್ರ ಸರಕಾರ ರಾಜ್ಯಕ್ಕೆ ಹೊಸ 52 ಚಾನಲ್ ಅನುಮೋದನೆ ನೀಡಿದೆ.

ಕೇಂದ್ರ ರಾಜ್ಯದ ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಕ್ಕೂ ಎಫ್ಎಂ ಮಜಾ ಅನುಭವಿಸುವ ಅವಕಾಶ ನೀಡಿದೆ. ಮಹಾನಗರಗಳಲ್ಲಿ ಎಫ್ಎಂ ಸ್ಟೇಷನ್ ಗಳು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ನಗರಗಳಿಗೆ ಈ ಸೇವೆಯನ್ನು ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ. ಖಾಸಗಿ ಏಜನ್ಸಿಗಳ ಮೂಲಕ ಮಾತ್ರ ಸೇವೆ ವಿಸ್ತರಿಸುವ ನಿರ್ಧಾರಕ್ಕೆ ಕೇಂದ್ರ ಬಂದಿದೆ. ಆದರೆ ಈ ವಾಹಿನಿಗಳು ಸುದ್ದಿ ಸಮಾಚಾರ ಪ್ರಸಾರ ಮಾಡುವಂತಿಲ್ಲ. ಆಕಾಶವಾಣಿ ಪ್ರಸಾರ ಮಾಡಿದ ಸಮಾಚಾರವನ್ನು ಮರು ಪ್ರಸಾರ ಮಾಡಬಹುದಾಗಿದೆ.

ಕೇಂದ್ರ ಹೊಸದಾಗಿ ಅನುಮೋದಿಸಿದ ಈ 52 ಚಾನಲ್ ಗಳು ಬೆಂಗಳೂರು ಮತ್ತು ಮಂಗಳೂರು ನಗರಗಳಿಗೆ ತಲಾ ಒಂದು, ಬೆಳಗಾವಿ ಮತ್ತು ಬಳ್ಳಾರಿ ನಗರಗಳಿಗೆ ತಲಾ ನಾಲ್ಕು, ಗುಲ್ಬರ್ಗ, ಬೀದರ್, ಬಿಜಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹೊಸಪೇಟೆ, ಕೋಲಾರ, ರಾಯಚೂರು, ಶಿವಮೊಗ್ಗ, ತುಮಕೂರು ಮತ್ತು ಉಡುಪಿ ನಗರಗಳಿಗೆ ತಲಾ ಮೂರು ಮತ್ತು ಮೈಸೂರು ನಗರಕ್ಕೆ ಎರಡು ಚಾನಲ್ ಆರಂಭಿಸಲು ಅನುಮೋದನೆ ನೀಡಿದೆ.

English summary
In a landmark decision Central Govt sanctions 52 FM channels to Karnataka. Thus FM Radios are ready to reach everu nook and corner of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X