ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಕೇಸು: ಕರುಣಾನಿಧಿ ನಿಕಟವರ್ತಿಗಳ ಮೇಲೆ ದಾಳಿ

By Srinath
|
Google Oneindia Kannada News

jayalalitha
ಚೆನ್ನೈ, ಜುಲೈ 27: ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ನಿಕಟವರ್ತಿಯೆಂದು ಪರಿಗಣಿಸಲಾದ ರಾಜ್ಯ ಜಾಗೃತ ದಳದ ಮಾಜಿ ಮುಖ್ಯಸ್ಥ ಎಂ.ಎಸ್. ಸೇಠ್ ಮತ್ತು ಭೂ ಮಂಜೂರಾತಿ ಹಗರಣಕ್ಕೆ ಸಂಬಂಧಿಸಿದ ಇತರ ಹಲವರ ಮನೆಗಳ ಮೇಲೆ ಜಾಗೃತಾ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ಗುಪ್ತಚರ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ ಪರಿಶೀಲನೆಗೆ ಒಳಪಟ್ಟಿರುವ ಈ ಅಧಿಕಾರಿಗಳ ಸಂಬಂಧಿಕರ ವಿರುದ್ಧ ಪ್ರಥಮ ಮಾಹಿತಿ ವರದಿಗಳನ್ನು (ಎಫ್ಐಆರ್) ಸಲ್ಲಿಸಲಾಗಿದೆ ಎಂದು ನಿರ್ದೇಶನಾಲಯ ಮೂಲಗಳು ತಿಳಿಸಿವೆ. ತಮಿಳುನಾಡು ವಸತಿ ಮಂಡಳಿಯ (ಟಿಎನ್ಎಚ್ ಬಿ) ಭೂ ಮಂಜೂರಾತಿ ಹಗರಣದಲ್ಲಿ ಷಾಮೀಲಾದ ಆರೋಪಕ್ಕೆ ಗುರಿಯಾದ ವಿವಿಧ ವ್ಯಕ್ತಿಗಳ ಪತಿ, ಪತ್ನಿ ಇಲ್ಲವೇ ಮಕ್ಕಳನ್ನು ನಿರ್ದೇಶನಾಲಯವು ಸಲ್ಲಿಸಿರುವ ಪ್ರಥಮ ಮಾಹಿತಿ ವರದಿಗಳಲ್ಲಿ ಹೆಸರಿಸಲಾಗಿದೆ.

ರಾಜ್ಯಾದ್ಯಂತ ಡಿಎಂಕೆ ಸ್ಥಳೀಯ ಕಾರ್ಯಕರ್ತರು ಷಾಮೀಲಾಗಿರುವರೆಂದು ಆಪಾದಿಸಲಾದ ಭೂ ಹಗರಣಗಳಿಗೆ ಸಂಬಂಧಿಸಿದಂತೆ ಜಯಲಲಿತಾ ಸರ್ಕಾರವು ಈ ದಾಳಿಗಳನ್ನು ನಡೆಸಿದೆ. ಸರ್ಕಾರವು ತನ್ನ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಕಲಿ ಪ್ರಕರಣಗಳನ್ನು ಸೃಷ್ಟಿಸಿ ದಾಳಿಗಳನ್ನು ನಡೆಸುತ್ತಿದೆ ಎಂದು ಈ ಮಧ್ಯೆ ಡಿಎಂಕೆ ಆಪಾದಿಸಿದೆ.

English summary
Directorate of Vigilance and Anti-Corruption (DVAC) raided close associates of Karunanidhi and Police Officilas in connection with Tamil Nadu Housing Board TNHB land allotment under Government Discretionary Quota case on July 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X