ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಅಧಿಕಾರಕ್ಕೆ ಪಾಕಿಸ್ತಾನದ ISI ಹಣ?

By Mahesh
|
Google Oneindia Kannada News

Yeddyurappa govt Pak ISI money
ಬೆಂಗಳೂರು ಜು 27: ಅಕ್ರಮ ಗಣಿಗಾರಿಕೆ ವರದಿ, ಲೋಕಾಯುಕ್ತರ ನಿರ್ಗಮನ, ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯ, ಹೈಕಮಾಂಡ್, ವಿಪಕ್ಷಗಳ ಹಾರಾಟದ ನಡುವೆ ಬಿಜೆಪಿ ಹಾಗೂ ಐಎಸ್ ಐ ನಂಟಿನ ಬಗ್ಗೆ ಕಾಂಗ್ರೆಸ್ ವಕ್ತಾರ ಸಂಜಯ್ ನಿರುಪಮ್ ಮಾಡಿದ ಗುರುತರ ಆರೋಪ ಸದ್ದು ಮಾಡದೆ ಸತ್ತಿದೆ. ಆದರೆ, ಈ ಬಗ್ಗೆ ರೆಡ್ಡಿ ಸೋದರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಬೆಳೆಸಲು ಯಡಿಯೂರಪ್ಪ ಅವರನ್ನು ಅಧಿಕಾರಕ್ಕೆ ತರಲು ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕಾ ಏಜೆನ್ಸಿ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ)ನಿಂದ ಹಣಕಾಸು ನೆರವು ಪಡೆಯಲಾಗಿದೆ. ಬಳ್ಳಾರಿ ರೆಡ್ಡಿ ಸೋದರರ ಮೂಲಕ ಐಎಸ್ ಐ ಹಣ ರಾಜ್ಯಕ್ಕೆ ಬಂದಿದೆ ಎಂದು ಕಾಂಗ್ರೆಸ್ ಸಂಜಯ್ ನಿರುಪಮ್ ಆರೋಪ ಮಾಡಿದ್ದರು.

ಯಶವಂತಪುರದಲ್ಲಿ ನಡೆದ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಾಕ್ರಮದಲ್ಲಿ ಪಾಲ್ಗೊಂಡಿದ್ದ ಸಂಜಯ್, ಬಳ್ಳಾರಿ ಗಣಿ ಸಂಪತ್ತನ್ನು ಪಾಕಿಸ್ತಾನಕ್ಕೆ ಹಡಗಿನ ಮೂಲಕ ಸಾಗಿಸಲಾಗುತ್ತಿದೆ. ಇದಲ್ಲದೆ ದುಬೈ, ಸಿಂಗಪುರದಲ್ಲೂ ಓಬಳಾಪುರಂ ಮೈನಿಂಗ್ ಕಂಪನಿ ತನ್ನ ಕಚೇರಿಗಳನ್ನು ತೆರೆದಿದೆ. ಪಾಕಿಸ್ತಾನವಲ್ಲದೆ ಚೀನಾದಲ್ಲೂ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಾಟವಾಗಿದೆ.

ಬಿಜೆಪಿ ಹೈಕಮಾಂಡ್ ಗೂ ಕಪ್ಪ ಸಂದಾಯವಾಗುತ್ತಿದೆ. ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಅವರ ಕಡೆಯಿಂದ ಹಣದ ಹೊಳೆ ಹರಿಯುತ್ತಿರುವುದರಿಂದ ಅವರನ್ನು ಇನ್ನೂ ಪಕ್ಷದಲ್ಲಿ ಉಳಿಸಿಕೊಳ್ಳಲಾಗಿದೆ. ಬಿಜೆಪಿ ಹಾಗೂ ಐಎಸ್ ಐ ನಡುವಿನ ನಂಟಿನ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವ ಪಿ ಚಿದಂಬರಂ ಅವರಿಗೆ ಮನವಿ ಮಾಡುವುದಾಗಿ ಸಂಜಯ್ ಹೇಳಿದ್ದಾರೆ.

English summary
Infamous Pakistan intelligance agency ISI money is flowing to Karnataka BJP through Reddy Brothers alleged Sanjay Nirupam, Congress spokesperson. Minister Sri Ramulu replied may be Sanjay has confused ans said BJP instead of Congress
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X