• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಫ್ ಇಂಡಿಯನ್ ಖ್ಯಾತಿಯ ನಟಿ ಕತ್ರಿನಾಗೆ ಬಿಜೆಪಿ ಹೂವೀಳ್ಯ

By Srinath
|
ಮುಂಬೈ, ಜುಲೈ 27: ಯಸ್. ರಾಹುಲ್‌ ಗಾಂಧಿ 'ಆಫ್ ಇಂಡಿಯನ್- ಆಫ್ ಇಟಾಲಿಯನ್' ಎಂದು ತಿಳಿದೋ, ತಿಳಿಯದೆಯೋ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿದ ಬಾಲಿವುಡ್‌ ನಟಿ ಕತ್ರೀನಾ ಕೈಫ್ ಗೆ ಬಿಜೆಪಿ ಅಗ್ರ ಮಣೆ ಹಾಕಿದೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕತ್ರೀನಾ ಅವರನ್ನು ಪಕ್ಷದ ಪರ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಲು ಪಕ್ಷ ನಿರ್ಧರಿಸಿದೆ.

ಕಾಂಗ್ರೆಸ್ ಪಕ್ಷದ ಯುವರಾಜನ ಕುರಿತಾದ ಕತ್ರೀನಾ ಹೇಳಿಕೆಯಲ್ಲಿ ಯಾವುದೇ ಸುಳ್ಳು ಇಲ್ಲ. ಕೋಟ್ಯಂತರ ಜನರ ಅಭಿಪ್ರಾಯವನ್ನು ಕೈಫ್ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕಾಗಿ ನಾವು ಅಭಿನಂದಿಸುತ್ತೇವೆ. ಬೇರೆ ಯಾರೂ ಮಾಡದ ಕೆಲಸವನ್ನು ಆಕೆ ಮಾಡಿದ್ದಾಳೆ. ಹೀಗಾಗಿ ಬಾಲಿವುಡ್‌ ನಟಿಯನ್ನು ಪಕ್ಷದ ಪರ ಪ್ರಚಾರಕ್ಕೆ ಆಹ್ವಾನಿಸಲು ಎಲ್ಲಾ ಪ್ರಯತ್ನ ಮಾಡುವುದಾಗಿ ಮುಂಬೈ ನಗರ ಬಿಜೆಪಿ ಅಧ್ಯಕ್ಷ ರಾಜ್‌. ಕೆ. ಪುರೋಹಿತ್‌ ಹೇಳಿದ್ದಾರೆ.

ಆಕೆ ತನ್ನ ಈ ಹೇಳಿಕೆ ಕುರಿತು ಕ್ಷಮೆ ಕೇಳಿದ್ದಾಳಾದರೂ ಅದು ಹೇಳಿಕೆಯನ್ನು ಹಿಂಪಡೆದಂತೆ ಅಲ್ಲ. ಯಾರಿಗಾದರೂ ತನ್ನ ಹೇಳಿಕೆಯಿಂದ ಬೇಸರವಾಗಿದ್ದರೆ ಅದಕ್ಕೆ ಕ್ಷಮೆ ಕೋರುತ್ತೇನೆ ಎಂದಿದ್ದಾಳೆ ಅಷ್ಟೇ ಎಂದು ಪುರೋಹಿತ್‌ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Katrina Kaif's recent not-so-controversial 'controversial' statement about Congress scion, Rahul Gandhi has brought her back in the limelight. Apparently, the BJP is now ready to cash in on the drama and is thus planning to invite Katrina for their election campaign.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more