ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಲಿಕಾಂ ಖಾತೆ ಹೊತ್ತಿದ್ದ ವಾಜಪೇಯಿಯೂ ಕಳಂಕಿತರೇ

By Srinath
|
Google Oneindia Kannada News

Atal Bihari Vajpayee
ನವದೆಹಲಿ, ಜುಲೈ 27: 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಜಗಮೋಹನ್ ಅವರಿಂದ ದೂರಸಂಪರ್ಕ ಖಾತೆಯನ್ನು ವಹಿಸಿಕೊಂಡಿದ್ದ ವಾಜಪೇಯಿ ಕೂಡ 2 ಜಿ ತರಂಗಾಂತರ ಹಗರಣದಲ್ಲಿ ತಪ್ಪಿತಸ್ಥರು ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ನೆನಪಿಸಿದ್ದಾರೆ.

ಇದೇ ವೇಳೆ, ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಜಾರಿಗೆ ತಂದ ವಲಸೆ ನೀತಿಯಿಂದಾಗಿ ರಾಷ್ಟ್ರದ ಬೊಕ್ಕಸಕ್ಕೆ 43,000 ಕೋಟಿ ರೂಪಾಯಿ ನಷ್ಟವಾಯಿತು ಎಂದು ಅವರು ಮತ್ತೊಂದು ಪ್ರಹಾರ ಮಾಡಿದ್ದಾರೆ.

ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಹೇಳಿಕೆಗೆ ಅಷ್ಟೊಂದು ಪ್ರಾಮುಖ್ಯ ನೀಡಿದ್ದೇ ಆದರೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ 2 ಜಿ ತರಂಗಾಂತರ ಹಗರಣದಲ್ಲಿ ಕಳಂಕಿತನ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎನ್ನುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

'ತರಂಗಾಂತರ ಪರವಾನಗಿ ಪಡೆದಿದ್ದ ಸ್ವಾನ್ ಮತ್ತು ಯುನಿಟೆಕ್ ಕಂಪನಿಗಳ ಷೇರು ಮಾರಾಟದ ಬಗ್ಗೆ ಮನಮೋಹನ್ ಸಿಂಗ್ ಮತ್ತು ಚಿದಂಬರಂ ನಡುವೆ ಚರ್ಚೆ ನಡೆದಿತ್ತು' ಎಂಬ ರಾಜಾ ಅವರ ಹೇಳಿಕೆ ಹಿನ್ನೆಲೆಯಲ್ಲಿ, ಈ ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು.

ತಾವು ಅನುಸರಿಸಿದ ನೀತಿ ತಪ್ಪು ಎನ್ನುವುದಾದರೆ 1993ರ ನಂತರ ದೂರ ಸಂಪರ್ಕ ಸಚಿವರಾದವರೆಲ್ಲರ ನೀತಿಗಳು ಕೂಡ ತಪ್ಪೇ ಆಗಿರುತ್ತವೆ ಎಂದು ರಾಜಾ ಸೋಮವಾರ ವಿಚಾರಣೆ ವೇಳೆ ಹೇಳಿದ್ದರು. ಹಾಗಿದ್ದರೆ, 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಜಗಮೋಹನ್ ಅವರಿಂದ ದೂರಸಂಪರ್ಕ ಖಾತೆಯನ್ನು ವಹಿಸಿಕೊಂಡಿದ್ದ ವಾಜಪೇಯಿ ಕೂಡ ತಪ್ಪಿತಸ್ಥರು ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ನೆನಪಿಸಿದ್ದಾರೆ.

English summary
A day after the opposition BJP targetted PM Singh and then finance minister P. Chidambaram over A. Raja's statement on the 2G scam, the Congress on Tuesday (July 26) hit back saying that former prime minister Atal Bihari Vajpayee was also indicted by the former telecom minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X