ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವತಿಗೆ ಸೆಕ್ಸ್ ಬೊಂಬೆ ಕೊರಿಯರ್ ಮಾಡುತ್ತಿದ್ದವನ ಬಂಧನ

By Srinath
|
Google Oneindia Kannada News

Suraj Sagar
ಮುಂಬೈ, ಜುಲೈ26: ಇಲ್ಲಿನ ಚಾರ್ಕೋಪ್ ಏರಿಯಾದಲ್ಲಿ 19 ವರ್ಷದ ಯುವತಿಗೆ ಅನಾಮಿಕ ಮಿಕವೊಂದು 15 ದಿನಗಳಿಂದ ಒಂದೇ ಸಮನೆ ಗಿಫ್ಟ್ ಐಟಂಗಳನ್ನು ಕಳಿಸತೊಡಗಿತ್ತು. ಆದರೆ ಅದೆರಲ್ಲೆಲ್ಲ ಮಹಿಳೆಯರ ಒಳುಡುಪುಗಳು ಮತ್ತು ಸೆಕ್ಟ್ ಗೊಂಬೆಗಳೇ ಇರುತ್ತಿದ್ದವು.

ಶಾನೆ ತಲೆ ಕೆಡಿಸಿಕೊಂಡ ಯುವತಿಯ ಅಪ್ಪ-ಅಮ್ಮವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಪೊಲೀಸರು ತಲೆಕೆಡಿಸಿಕೊಳ್ಳತೊಡಗಿದರು. ಕೊನೆಗೆ ಆ ಅನಾ'ಮಿಕ' ಯಾರು ಎಂಬುದನ್ನು ಪತ್ತೆ ಹಚ್ಚಿದರು. ಅಂತಹ ವಿಕೃತ ಐಟಂಗಳನ್ನು ನೀಡುತ್ತಿದ್ದವ 21 ವರ್ಷದ ಯುವಕ.

ಅಷ್ಟಕ್ಕೂ ಅವನ್ಯಾಕಪ್ಪಾ ಈ ರೀತಿ ಮಾಡತೊಡಗಿದ ಅಂದರೆ ಆ ಯುವತಿಯ ಮೇಲೆ ವ್ಯಾಮೋಹಗೊಂಡಿದ್ದ. ಸೂರಜ್ ಸಾಗರ್ ಎಂಬ ಈ ವಿಕೃತ ಕಾಮಿ ಎರಡು ವಾರಗಳಿಂದ ಯುವತಿಯ ಹಿಂದೆ ಬಿದ್ದಿದ್ದ. ಅಷ್ಟೇ ಅಲ್ಲ ಈ ವಿಕೃತ ಯುವತಿಯ ಅಪ್ಪನಿಗೆ ಕರೆ ಮಾಡಿ ಮನಸಾರೆ ಬೈದಾಡುತ್ತಿದ್ದ.

ಸರಿ ಇವನ ಕಾಟ ತಾಳಲಾರದೆ ಪೊಲೀಸರು ಮೊರೆ ಹೋಗಲಾಗಿತ್ತು. ಪೊಲೀಸರು ಮೊಬೈಲ್ ಕರೆಗಳು ಎಲ್ಲಿಂದ ಬರುತ್ತಿವೆ ಎಂಬುದನ್ನು ಪತ್ತೆ ಹಚ್ಚಿದರು. ಮಲಾಡ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಸೇರಿದ ಸಿಮ್ ಕಾರ್ಡ್ ಅದಾಗಿತ್ತು. ಆದರೆ ಆ ವಿದ್ಯಾರ್ಥಿನಿಯ ಮೊಬೈಲ್ ಕಳೆದುಹೋಗಿತ್ತು. ದೂರು ಸಹ ನೀಡಿದ್ದಳು.

ಕೊನೆಗೆ ಈ ವಿದ್ಯಾರ್ಥಿನಿಯ ಫ್ರೆಂಡ್ ಒಬ್ಬ ಆ ಮೊಬೈಲ್ ಅನ್ನು ಎತ್ತಿಹಾಕಿದ್ದ. ಅದು ಹೇಗೋ ಸೂರಜ್ ಕೈಸೇರಿತು. ಸರಿ ಅವ ಆಟ ಶುರುವಿಟ್ಟುಕೊಂಡಿದ್ದ. ದೂರಜ್ ನನ್ನು ಜುಲೈ 27ರಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

English summary
A 21-year-old Suraj Sagar who was the secret presenter of the perverted gifts to a teen has been arrested in Mumbai on July 26. Apparently, he had been smitten with the girl. Suraj began harassing the girl two weeks ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X