ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾತೆ ಬದಲಾದರೂ ಜೈರಾಮ್ ರಮೇಶ್ ಕೀಟಲೆ ಬದಲಾಗಿಲ್ಲ

By Mahesh
|
Google Oneindia Kannada News

Minister Jairam Ramesh
ಜೈಪುರ ಜು 26: ಪಂಚಾಯತ್ ರಾಜ್ ಖಾತೆ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರ ಲಕ್ ಯಾಕೋ ಸರಿಯಿಲ್ಲ. ಪರಿಸರ ಖಾತೆಯಿಂದ ಪಂಚಾಯತ್ ರಾಜ್ ಖಾತೆ ಸೇರಿದರೂ ಅವರ ಹಿಂದೆ ಹಿಂದೆ ಆರೋಪಗಳು ಸುತ್ತುವರೆಯುತ್ತಿದೆ.

ಬೈಕನಾರ್ ನಲ್ಲಿ ಸೋಮವಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜೈರಾಮ್ ಮಾಡಿದ ಕೆಲಸ ಕಂಡು ಗಾಂಧೀಜಿ ಭಕ್ತರು 'ಹೇ ರಾಮ್..' ಎಂದು ಉದ್ಗಾರ ತೆಗೆದಿದ್ದಾರೆ. ಚರಕದಿಂದ ಹತ್ತಿ ಬಟ್ಟೆ ತಯಾರಿಸುವ ಮಹಾತ್ಮ ಗಾಂಧೀಜಿ ಅವರ ಕಾಯಕಕ್ಕೆ ಹೆಚ್ಚಿನ ಪ್ರಚಾರ ಸಿಗಲೆಂದು ಸಚಿವರಿಗೆ ಹತ್ತಿ ವಸ್ತ್ರವನ್ನು ನೀಡಲಾಗಿತ್ತು.

ಅಶೋಕ್ ಗೆಹ್ಲೋಟ್ ಸೇರಿದಂತೆ ಅನೇಕ ಸರ್ಕಾರಿ ಅಧಿಕಾರಿಗಳೊಡನೆ ವೇದಿಕೆ ಮೇಲೆ ಕೂತಿದ್ದ ಜೈರಾಮ್ ಇದ್ದಕ್ಕಿದ್ದಂತೆ ಹತ್ತಿ ವಸ್ತ್ರವನ್ನು ಹೆಗಲಿಂದ ಕೆಳಗಿಳಿಸಿ ಕುರ್ಚಿ ಮೇಲೆ ಹಾಕಿದರು. ನಂತರ , ಗಲೀಜಾಗಿದ್ದ ತಮ್ಮ ಶೂಗಳನ್ನು ಅದೇ ಹತ್ತಿ ಬಟ್ಟೆಯಿಂದ ಚೆನ್ನಾಗಿ ಒರೆಸತೊಡಗಿದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಗಾಂಧೀಜಿ ಅವರು ಪರಮ ಭಕ್ತಿಭಾವದಿಂದ ಕಾಣುತ್ತಿದ್ದ ಚರಕದಿಂದ ನೇಯ್ದ ಹತ್ತಿ ಬಟ್ಟೆಯನ್ನು ಈ ರೀತಿ ಬಳಸಿರುವ ಸಚಿವ ಜೈರಾಮ್ ಗೆ ಸ್ಥಳೀಯ ಬಿಜೆಪಿ ಛೀಮಾರಿ ಹಾಕಿದೆ. ಮಹಾತ್ಮ ಗಾಂಧೀಜಿ ಅವರ ಅನುಯಾಯಿಗಳಿಗೆ ಅತ್ಯಂತ ದುಃಖ ತಂದಿದೆ ಎಂದು ಬಿಜೆಪಿ ಎಂಎಲ್ ಎ ದಿಗಂಬರ್ ಸಿಂಗ್ ಹೇಳಿದ್ದಾರೆ.

English summary
Union minister for Panchayat Raj, Jairam Ramesh shocked everyone on Monday. He Ramesh took out his garland of spun cotton a symbolic of Mahatma Gandhi's iconic spinning wheel and wiped his shoes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X