ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ ದಿವಸ್ ದಂದು ಕಾರ್ಗಿಲ್ ವೀರರನ್ನು ಸ್ಮರಿಸಿರಿ

By Mahesh
|
Google Oneindia Kannada News

Kargil Vijay Diwas
ದ್ರಾಸ್, ಜು. 26: 1999ರಲ್ಲಿ ಕಾರ್ಗಿಲ್ ಯುದ್ಧ ವಿಜಯದ 12ನೆ ವರ್ಷಾಚರಣೆಯ ಅಂಗವಾಗಿ ಜಮ್ಮು ಮತ್ತು ಕಾಶ್ಮೀರ ಉಪ ವಲಯದ ಸೇನೆ ಎರಡು ದಿನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸುಮಾರು 527 ಯೋಧ ಬಲಿದಾನ ಹಾಗೂ 1300 ಯೋಧರನ್ನು ಗಾಯಗೊಳಿಸಿದ ಕಾರ್ಗಿಲ್ ಯುದ್ಧದ ವಿಜಯೋತ್ಸವ ದೇಶದ ಹಲವೆಡೆ ಇಂದು ಆಚರಿಸಲಾಗುತ್ತಿದೆ.

ಸಮುದ್ರ ಮಟ್ಟಕ್ಕಿಂತಲೂ 11,500 ಅಡಿ ಎತ್ತರದಲ್ಲಿರುವ ದ್ರಾಸ್ ಪಟ್ಟಣದ ಸಮೀಪದ ಉಂಪಲ ರಿಡ್ಜ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧ ಭೂಮಿಯಲ್ಲಿ ಎರಡು ದಿನಗಳ ವಿಜಯೋತ್ಸವ ಸಂಭ್ರಮಾಚರಣೆಗೆ ಚಾಲನೆ ನೀಡಲಾಗಿದೆ.

ಈ ಸಂಭ್ರಮಾಚರಣೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೇನಾಧಿಕಾರಿಗಳು ಮತ್ತು ಸೈನಿಕರು ಹಾಗೂ ಹುತಾತ್ಮ ಯೋಧರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದಾರೆ. ಬ್ಯಾಂಡ್ ವಾದನ, ಪಥ ಸಂಚಲನ, ಪೊಲೋ ಪಂದ್ಯ, ವೀರ ಯೋಧರ ನೆನಪಿನ ಕಾರ್ಯಕ್ರಮಗಳು ನಡೆಯಲಿದೆ.

ಹಿಮಾಲಯದ ತಪ್ಪಲಿನಲ್ಲಿ ಸುಮಾರು -15 ಡಿಗ್ರಿ ಸೆಲಿಷಿಯಸ್ ತಾಪಮಾನದಲ್ಲಿ ಸುಮಾರು 60 ದಿನಗಳ ನಡೆದ ಕಾರ್ಗಿಲ್ ಯುದ್ಧ ಜುಲೈ 26, 1999ರಂದು ಕೊನೆಗೊಂಡಿತ್ತು. ಆಪರೇಷನ್ ವಿಜಯ್ ಹೆಸರಿನ ಭಾರತೀಯ ಸೇನೆಯ ಕಾರ್ಯಾಚರಣೆ ಯಶಸ್ವಿಯಾಗಿತ್ತು.

ಲೆ. ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಯೋಗೆಂದ್ರ ಸಿಂಗ್, ಸಂಜಯ್ ಕುಮಾರ್, ಮೇಜರ್ ಪದ್ಮಪಾಣಿ ಆಚಾರ್ಯ, ಲೆಫ್ಟಿನೆಂಟ್ ಬಲ್ವಾನ್ ಸಿಂಗ್, ಮೇಜರ್ ಸರವಣನ್, ಲೆಫ್ಟಿನೆಂಟ್ ಕಣಾದ್ ಭಟ್ಟಚಾರ್ಯ(22ವರ್ಷ), ಕ್ಯಾಪ್ಟನ್ ಸಜು ಚೇರಿಯನ್, ಲೆ. ಕೈಸಿಂಗ್ ಕ್ಲಿಫರ್ಡ್ ನಂಗ್ರಮ್,ಕ್ಯಾ. ಜೆರ್ರಿ ಪ್ರೇಮ್ ರಾಜ್,ಮೇಜರ್ ಸೋನಮ್ ವಾಂಗ್ ಚುಕ್, ಕ್ಯಾ ವಿಜಯ್ ಥಾಪರ್, ರಾಜಶ್ರೀ ಗುಪ್ತ ಸೇರಿದಂತೆ ಇತರೆ ಯೋಧರಿಗೆ ಇದೋ ನಮ್ಮ ನಮನ

English summary
Today(Jul 26) nation celebrartes 12th anniversary of Kargil victory(kargil vijay diwas). Army will be celebrating the day with a host of events at the War Memorial in Drass in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X