ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಧಿಕ ಸಂಬಳ ಪಡೆಯುವ ಸಾಫ್ಟ್ ವೇರ್ ಸಿಇಒ-2

By Mahesh
|
Google Oneindia Kannada News

Vineet Nayar, CEO, HCL Technologies
ಎಚ್ ಸಿಎ ಲ್ ಟೆಕ್ನಾಲಜೀಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೀತ್ ನಾಯರ್ ಅವರ ಒಟ್ಟಾರೆ ಸಂಬಳ ವಾರ್ಷಿಕವಾಗಿ 4.54 ಕೋಟಿ ರು ಮುಟ್ಟುತ್ತದೆ. 1,000,000 ಈಕ್ವಿಟಿ ಷೇರುಗಳನ್ನು ನಾಯರ್ ಹೊಂದಿದ್ದಾರೆ. 49 ವರ್ಷದ ನಾಯರ್ ಎಚ್ ಸಿಎಲ್ ಬೋರ್ಡ್ ನ ಉಪಾಧ್ಯಕ್ಷ ಹಾಗೂ ಶಾಶ್ವತ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

1962ರಲ್ಲಿ ಜನಿಸಿದ ವಿನೀತ್ ನಾಯರ್ ಬಿಇ ಹಾಗೂ ಎಂಬಿಎ ಪದವಿ ಪಡೆದಿದ್ದಾರೆ. 1985 ರಲ್ಲಿ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಎಚ್ ಸಿಎಲ್ ಸೇರ್ಪಡೆ. ಸೇಲ್ಸ್ ,ಮಾರ್ಕೆಟಿಂಗ್ ಹುದ್ದೆಗಳನ್ನು ಅಲಂಕರಿಸಿದ ನಂತರ 1994ರಲ್ಲಿ ಐಟಿ ಮೂಲ ಸೌಕರ್ಯ ಹಾಗೂ ನೆಟ್ ವರ್ಕಿಂಗ್ ಸರ್ವೀಸ್ ನತ್ತ ಕಣ್ಣು ಹಾಯಿಸಿದರು. 2005ರಲ್ಲಿ ನಾಯರ್ ಅವರನ್ನು ಎಚ್ ಸಿಎಲ್ ಟೆಕ್ನಾಲಜೀಸ್ ನ ಅಧ್ಯಕ್ಷರಾಗಿ ಶಿವ್ ನಾಡರ್ ನೇಮಿಸಿದರು.

'Employee First, Customer Second' ತತ್ತ್ವ ಅಳವಡಿಸಿದ ನಾಯರ್ ಎಚ್ ಸಿಎಲ್ ನಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದರು. 2007ರಲ್ಲಿ ಸಿಇಒ ಆಗಿ ನೇಮಕಗೊಂಡರು.
2010ರಲ್ಲಿ ಎಚ್ ಸಿಎಲ್ ನ ಉಪಾಧ್ಯಕ್ಷರಾಗಿ ನಿಯುಕ್ತಿಗೊಂಡರು.

ಪ್ರಶಸ್ತಿ, ಗೌರವಾದರಗಳು: ನಾಯರ್ ಆರಂಭಿಸಿದ ಹೊಸ ಎಚ್ ಆರ್ ನಿಯಮಾವಳಿಗಳು ವಿಶ್ವದೆಲ್ಲೆಡೆ ಪ್ರಸಿದ್ಧವಾಗಿದೆ. ನಾಯರ್ ಅವರ ನಾಯಕತ್ವವನ್ನು ಫಾರ್ಚೂನ್, ಲಂಡನ್ ಬಿಸಿನೆಸ್ ಸ್ಕೂಲ್, ಐಡಿಸಿ ಹಾಡಿ ಹೊಗಳಿದೆ.
*2007 ರಲ್ಲಿ ಬಿಸಿನೆಸ್ ವೀಕ್ ನ ಶ್ರೇಷ್ಠ ತಂತ್ರಜ್ಞಾನ ಕಂಪನಿ ಪ್ರಶಸ್ತಿ,2008ರಲ್ಲಿ ಅಮೆರಿಕದಿಂದ ಎಚ್ ಆರ್ ಇನ್ನೋವೇಷನ್ ಗಾಗಿ ಪ್ರಶಸ್ತಿ
*2009ರಲ್ಲಿ ಹೆವಿಟ್ ನೀಡುವ ಏಷ್ಯಾದ ಅತ್ಯುತ್ತಮ ಉದ್ಯೋಗಿ ಎಂಬ ಶ್ರೇಯಾಂಕಕ್ಕೆ ನಾಯರ್ ಪಾತ್ರರಾದರು.
*ಸಿಆರ್ ಎಫ್ ಫೌಂಡೇಷನ್ ನಿಂದ ಬ್ರಿಟನ್ನಿನ ಬೆಸ್ಟ್ ಎಂಪ್ಲಾಯರ್ ಪ್ರಶಸ್ತಿ
* ನಾಯರ್ ಅವರ ನಿಯಮಾವಳಿಗಳನ್ನು ಪ್ರತಿಷ್ಠಿತ ಹಾರ್ವಡ್ ಬಿಸಿನೆಸ್ ಸ್ಕೂಲ್ ನಲ್ಲಿ ಅಳವಡಿಸಿಕೊಳ್ಳಲಾಗಿದೆ.
* ಟಾಪ್ 50 ಬಿಸಿನೆಸ್ ಥಿಂಕರ್ ಗಳಲ್ಲಿ ನಾಯರ್ ಅವರು ಒಬ್ಬರು ಎಂಬುದು ಎಚ್ ಸಿಎಲ್ ನ ಹೆಮ್ಮೆ.

English summary
Meet the Corporate Czar-2 : List of Indian CEOs getting highest salary. Vineet Nayar is the CEO of HCL Technologies, netted himself a compensation amounting to Rs 4.54 crore in 2010. At the age of 49, he is also an IT executive, vice-chairman and member of HCL's board of directors. Vineet chants " Employee First, Customer Second" Mantra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X