ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾದಗಿರಿ ಗಡ್ಡಿ ಗ್ರಾಮಸ್ಥರು ಇನ್ನೂ ನಡುಗಡ್ಡೆಯಲ್ಲಿ

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Yadgir District admin fails to rescue villagers
ಯಾದಗಿರಿ, ಜು. 26 : ಕೃಷ್ಣಾ ನದಿಯಲ್ಲಿ ಹೆಚ್ಚಿದ ಪ್ರವಾಹದಿಂದಾಗಿ ನಡುಗಡ್ಡೆಯಂತಾಗಿರುವ ಸುರಪುರ ತಾಲೂಕಿನ ನಿಲಕಂಠರಾಯನ ಗಡ್ಡಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಸಿಲುಕಿರುವ ಜನರನ್ನು ರಕ್ಷಿಸಲು ಮತ್ತು ಅವರಿಗೆ ಆಹಾರ ಒದಗಿಸಲು ಯಾದಗಿರಿ ಜಿಲ್ಲಾ ಆಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಗ್ರಾಮದಲ್ಲಿರುವ ಜನರಿಗೆ ಆಹಾರ ಪದಾರ್ಥಗಳನ್ನು ಒದಗಿಸಲು ಗುಲಬರ್ಗಾದಿಂದ 5 ಜನರ ಡಿಆರ್ ಪೊಲೀಸರ ತಂಡ, ಒಂದು ಬೋಟ್ ತರಿಸಲಾಗಿತ್ತಾದರೂ, ನೀರಿನಲ್ಲಿ ಪ್ರವಾಹ ಹೆಚ್ಚಿದ್ದರಿಂದ ಬೋಟ್ ಅರ್ಧಕ್ಕೇ ಹಿಂದಿರುಗಿ ಬಂದಿದೆ. ಪ್ರವಾಹ ಇಳಿಮುಖವಾಗುತ್ತಿದ್ದಂತೆ ಗ್ರಾಮಸ್ಥರಿಗೆ ಆಹಾರ ಒದಗಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.

ನಾರಾಯಣಪೂರ ಆಣೆಕಟ್ಟೆಯಿಂದ ಹೆಚ್ಚಿನ ನೀರನ್ನು ಬಿಟ್ಟಿದ್ದರಿಂದಾಗಿ ನಿಲಕಂಠರಾಯನ ಗಡ್ಡಿ ಗ್ರಾಮ ಹೊರಜಗತ್ತಿನಿಂದ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿದೆ. ಆ ಗ್ರಾಮದಲ್ಲಿ ಸುಮಾರು 50 ಮನೆಗಳಿದ್ದು, 250 ಜನರು ವಾಸಿಸುತ್ತಿದ್ದಾರೆ. ಅಲ್ಲಿಂದ ಈಜಿಕೊಂಡು ಬಂದಿರುವ ಐವರು, ಗ್ರಾಮದಲ್ಲಿ ತೀವ್ರ ಆಹಾರದ ಕೊರತೆ ಇದೆಯೆಂದು ಹೇಳಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ರೂಪಾ ಮೌದ್ಗೀಲ್, ಎಸಿ ಕವಿತಾ ಮನ್ನಿಕೇರಿ, ಸುರಪೂರ ತಹಶೀಲ್ದಾರ ರಾಧೇಶಾಮ ಭೇಟಿ ನೀಡಿ ಪರಿಶೀಲಿಸಿದರು. ನಾಳೆ ಬೆಳಿಗ್ಗೆ ಕೃಷ್ಣಾ ನದಿಯ ಪ್ರವಾಹದ ನೀರು ಇಳಿಮುಖವಾದಾಗ ಗ್ರಾಮಸ್ಥರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಲಾಗುವುದೆಂದು ತಹಶೀಲ್ದಾರ ಹೇಳಿದ್ದಾರೆ.

English summary
Nilkantharayana Gaddi village in Yadgir district is completely cut from the outer world as the village has become a island. Flood in Krishna river has pushed the villagers to the corner. Police commissioner, Assistant commissioner, Tahasildar visited the spot, but failed to rescue villagers or provide food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X