ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು : ಮೂವರು ಮೀನುಗಾರರು ನಾಪತ್ತೆ

By Chidambar Baikampady
|
Google Oneindia Kannada News

ಮಂಗಳೂರು, ಜು. 26 : ಮೂರು ದಿನಗಳ ಹಿಂದೆ ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದ್ದ ಮೂವರು ಮೀನುಗಾರರು ವಾಪಸ್ ಬಾರದೆ ಕಾಣೆಯಾದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗ್ರೆ ನಿವಾಸಿಗಳಾದ ಫ್ರಾನ್ಸಿಸ್ ಫ್ರಾಕ್ (23), ಮನೋಹರ್ ಪುತ್ರನ್ (41), ದೇರಳಕಟ್ಟೆಯ ನಿವಾಸಿ ವಿನ್ಸಿ (40)ನಾಪತ್ತೆಯಾಗಿರುವ ಮೀನುಗಾರರಾಗಿದ್ದಾರೆ.

ಇವರು ಬೆಂಗ್ರೆಯ ಲಕ್ಷ್ಮಣ್ ಎಂಬವರಿಗೆ ಸೇರಿದ ಜೈ ಪಾಂಡುರಂಗ ನಾಡ ದೋಣಿಯಲ್ಲಿ ಜು.23ರಂದು ಮಧ್ಯಾಹ್ನ ಒಂದು ಗಂಟೆಗೆ ಮೀನುಗಾರಿಕೆಗೆಂದು ಸಮುದ್ರದಲ್ಲಿ ಹೋದವರು ಸಂಜೆ ಆರು ಗಂಟೆಯ ಹೊತ್ತಿಗೆ ದೋಣಿಯ ಎಂಜಿನ್ ಕೆಟ್ಟಿದೆ ಎಂದು ಮೊಬೈಲ್ ಮೂಲಕ ಕರೆ ಮಾಡಿ ತಿಳಿಸಿದ್ದರು. ಆ ಬಳಿಕ ಅವರ ಸುಳಿವು ಇಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ.

ಮೀನುಗಾರರು ಮಂಗಳೂರು ಸಮುದ್ರ ಕಿನಾರೆಯಿಂದ 13 ನಾಟಿಕಲ್ ದೂರ ಸಾಗಿದ್ದರು ಎಂಬ ಮಾಹಿತಿ ಇದೆ. ಸಮುದ್ರದಲ್ಲಿ ಅವರ ಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾವು ಸಂಕಷ್ಟದಲ್ಲಿರುವುದಾಗಿ ಫ್ರಾನ್ಸಿಸ್ ಫ್ರಾಂಕ್ ತನ್ನ ಸಹೋದರಿ ಲವಿನಾ ಫ್ರಾಂಕ್‌ರಿಗೆ ಪೋನ್ ಮಾಡಿ ತಿಳಿಸಿದ್ದರು. ಇವರು ದೋಣಿಯ ಮಾಲಕ ಹಾಗೂ ನಾಡದೋಣಿ ಮೀನುಗಾರರ ಸಂಘಟನೆಯವರಿಗೆ ಮಾಹಿತಿ ನೀಡಿದ್ದಾರೆ. ಇನ್ನೂಪತ್ತೆಯಾಗದ ಕಾರಣ ಮೂರು ದಿನಗಳ ಬಳಿಕ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Three fishermen are missing in Mangalore since July 23. A missing case has been registered at Panambur police station. Fishers are not responding to the mobile call too. It is raining heavily in the coastal Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X