ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಜಯ್ ಸಾಲಸ್ಕರ್ ಪುತ್ರಿಗೆ ಕೊನೆಗೂ ಮಹಾ ಉದ್ಯೋಗ
ಮುಂಬೈ, ಜುಲೈ25: ಮುಂಬೈ ಮೇಲೆ ಉಗ್ರರ ದಾಳಿ ವೇಳೆ ಪ್ರಾಣಾರ್ಪಣೆ ಮಾಡಿದ್ದ ಪೊಲೀಸ್ ಅಧಿಕಾರಿ, ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಾಲಸ್ಕರ್ ಕುಟುಂಬದ ಮೇಲೆ ಕೊನೆಗೂ ಮಹಾರಾಷ್ಟ್ರ ಸರ್ಕಾರ 'ಕರುಣೆ' ತೋರಿದೆ. ಅಪ್ಪ ಸತ್ತ ಎರಡೂವರೆ ವರ್ಷಗಳ ಬಳಿಕ ಅತ್ತೂ ಕರೆದು ಅವರ ಮಗಳಿಗೆ ಸರ್ಕಾರಿ ಉದ್ಯೋಗ ಕರುಣಿಸಿದೆ! ಇದೀಗ ದಿವ್ಯಾ ಸಾಲಸ್ಕರ್ ಆದಾಯ ತೆರಿಗೆ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮೀಷನರ್.
2008ರ ನವೆಂಬರ್ 26ರಂದು ಪಾಕ್ ಮೂಲದ ಉಗ್ರರು ಮುಂಬೈ ಮೇಲೆ ದಾಳಿ ಮಾಡಿದಾಗ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದ ವಿಜಯ್ ಸಾಲಸ್ಕರ್ ಉಗ್ರರ ಗುಂಡಿಗೆ ಬಲಿಯಾಗಿದ್ದರು. ಆಗ ಸಾಲಸ್ಕರ್ ಮನೆಗೆ ಭೇಟಿ ನೀಡಿದ್ದ ರಾಜಕಾರಣಿಗಳು ನೆರವಿನ ಭರವಸೆಯಿತ್ತಿದ್ದರು. ಆದರೆ ದಿನ ಕಳೆದಂತೆ ಈ ವಿಷಯವನ್ನು ಮರೆತೇ ಬಿಟ್ಟಿದ್ದರು.
ಈ ಬಗ್ಗೆ ಅವರ ಪುತ್ರಿ ದಿವ್ಯಾ ಸಾಲಸ್ಕರ್ ಹಲವು ಬಾರಿ ಮನವಿ ಮಾಡಿದರೂ ಮಹಾರಾಷ್ಟ್ರ ಸರ್ಕಾರ ತಲೆಕೆಡಿಸಿಕೊಂಡಿರಲೇ ಇಲ್ಲ. ಆದರೆ ಇತ್ತೀಚಿಗೆ ಈ ವಿಷಯ ಕೇಂದ್ರ ಗೃಹ ಸಚಿವ ಚಿದಂಬರಂ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಜೊತೆ ಚರ್ಚಿಸಿದ್ದ ಅವರು ಶೀಘ್ರ ಸಾಲಸ್ಕರ್ ಪುತ್ರಿಗೆ ಕೆಲಸ ನೀಡಲು ಸೂಚಿಸಿದ್ದರು.