ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲಿಸಿಟರ್ ಜನರಲ್‌: ಸುಬ್ರಮಣ್ಯಂ ಹೋದ್ರು ಜೂ. ನಾರಿಮನ್‌ ಬಂದ್ರು

By Srinath
|
Google Oneindia Kannada News

Rohinton Nariman
ನವದೆಹಲಿ, ಜುಲೈ 24: ಸರ್ಕಾರದ ನೂತನ ಸಾಲಿಸಿಟರ್ ಜನರಲ್‌ ಆಗಿ ಹಿರಿಯ ವಕೀಲ ರೋಹಿನ್ಟನ್‌ ನಾರಿಮನ್‌ ನಿರೀಕ್ಷೆಯಂತೆ ನೇಮಕಗೊಂಡಿದ್ದಾರೆ. ಹಿರಿಯ ನ್ಯಾಯವಾದಿ ಫಾಲಿ ಎಸ್‌. ನಾರಿಮನ್‌ ಅವರ ಪುತ್ರ ರೋಹಿನ್ಟನ್‌ ನಾರಿಮನ್‌ ಇತ್ತೀಚಿಗೆ ಕೇಂದ್ರ ಟೆಲಿಕಾಂ ಸಚಿವ ಕಪಿಲ್‌ ಸಿಬಲ್‌ ಅವರನ್ನು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಸರ್ಕಾರಿ ಪ್ರಕರಣವನ್ನು ಖಾಸಗಿ ವಕೀಲ ನಾರಿಮನ್‌ಗೆ ವಹಿಸಿದ್ದನ್ನು ಪ್ರತಿಭಟಿಸಿ ಹಿಂದಿನ ಸಾಲಿಸಿಟರ್ ಜನರಲ್‌ ಗೋಪಾಲ್‌ ಸುಬ್ರಮಣ್ಯಂ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ರೋಹಿನ್ಟನ್‌ ಅವರನ್ನೇ ನೇಮಿಸಲು ಸರ್ಕಾರ ನಿರ್ಧರಿಸಿದೆ. ಮುಂದಿನ ವಾರ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ.

55 ವರ್ಷದ ನಾರಿಮನ್‌, ರಿಲಯನ್ಸ್‌ ಸೇರಿದಂತೆ ಅನೇಕ ಕಂಪನಿಗಳ ಕಾರ್ಪೋರೆಟ್‌ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಹಿರಿಯ ವಕೀಲರೆನಿಸಿಕೊಳ್ಳಲು ಇರುವ ವಯೋಮಿತಿಯನ್ನು ಸುಪ್ರೀಂ ಕೋರ್ಟು 1993ರಲ್ಲಿ 45ರಿಂದ 35ಕ್ಕೆ ಇಳಿಸಿತ್ತು. ಆಗ 37 ವರ್ಷದವರಾಗಿದ್ದ ನಾರಿಮನ್‌ ಹಿರಿಯ ವಕೀಲರೆನಿಸಿಕೊಂಡರು. ನಾರಿಮನ್‌ಗೆ ನ್ಯಾಯಾಂಗದಲ್ಲಿ 35 ವರ್ಷಗಳ ಅನುಭವವಿದೆ.

English summary
Senior advocate Rohinton Nariman will be the next Solicitor General of India. He will replace Gopal Subramanium, who quit recently after the government decided to field Nariman in his place in the 2G case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X