ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದ ಸರ್ಕಾರಿ ವೆಬ್ ನಲ್ಲಿ ಕಾಮೋತ್ತೇಜಕ ಆಡ್

By Mahesh
|
Google Oneindia Kannada News

Mapcost website
ಭೋಪಾಲ್ ಜು 24: ಮಧ್ಯಪ್ರದೇಶ ಸರ್ಕಾರದ ಅಧಿಕೃತ ವೆಬ್ ತಾಣದಲ್ಲಿ ಕಾಮೋತ್ತೇಜಕ ಮಾತ್ರೆಗಳ ಕಂಪನಿ ಜಾಹೀರಾತು ನೀಡಲಾಗಿದೆ. ವೆಬ್ ತಾಣದ ಮುಖಪುಟದ ಮಧ್ಯಭಾಗದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭಾವಚಿತ್ರವಿದೆ. ಬಲಭಾಗದಲ್ಲಿ BIOTAB ಎಂಬ ಕಂಪನಿಗೆ ಲಿಂಕ್ ಕೊಡಲಾಗಿದೆ.

ರಾಜ್ಯದ ಸಚಿವರು, ಅಧಿಕಾರಿಗಳು, ವಿಜ್ಞಾನಿಗಳು, ಶೈಕ್ಷಣಿಕ ತಜ್ಞರು ಹಾಗೂ ಇನ್ನಿತರ ಗಣ್ಯರರನ್ನು ಒಳಗೊಂಡಿರುವ Madhya Pradesh Council for Science and Technology (Mapcost) ವೆಬ್ ಸೈಟ್ ನಲ್ಲಿ ಮಧ್ಯಪ್ರದೇಶದ ವೈಜ್ಞಾನಿಕ ಹಾಗೂ ಮಾಹಿತಿ ತಂತ್ರಜ್ಞಾನ ನಿಯಮಗಳ ಪ್ರಚಾರಕ್ಕಾಗಿ ಮೀಸಲಿಡಲಾಗಿದೆ.

ಆದರೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಪುರುಷರ ಹಾಗೂ ಮಹಿಳೆಯರ ಲೈಂಗಿಕ ಶಕ್ತಿ ವರ್ಧಕ ಗುಳಿಗೆ ಕುರಿತ ಲಿಂಕ್ ರಾರಾಜಿಸುತ್ತಿದೆ. ಲಿಂಕ್ ಕ್ಲಿಕ್ ಮಾಡಿದರೆ ಆ ಕಂಪನಿ ವೆಬ್ ತಾಣಕ್ಕೆ ಹೋಗುತ್ತದೆ. ಅಲ್ಲಿ ಪಕ್ಕಾ ಲೈಂಗಿಕ ತಾಣದ ಜಾಹೀರಾತುಗಳು, ಕಾಂಡೋಮ್ ಆಡ್, ಲೈಂಗಿಕ ಗುಳಿಗೆಗಳ ವಿವರಗಳಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಬ್ ನಿರ್ವಾಹಕರು, ಯಾವುದೇ ಖಾಸಗಿ ಜಾಹೀರಾತಿಗೆ ಅನುಮತಿ ನೀಡಿಲ್ಲ. ಇದು ಹೇಗೆ ನುಸುಳಿದೆ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಕೆಲವರು ಯಾರಾದರು ಹ್ಯಾಕ್ ಮಾಡಿರಬಹುದು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರಿ ವೆಬ್ ತಾಣದಲ್ಲಿ ಈ ರೀತಿ ಜಾಹೀರಾತು ಕಾಣಿಸಿಕೊಂಡಿರುವುದು ರಾಜ್ಯಕ್ಕೆ ಮಾಡಿದ ಅಪಮಾನ ಎಂದಿರುವ ಸೈಬರ್ ಕ್ರೈಂ ವಿಭಾಗ ತನಿಖೆ ಮುಂದುವರೆಸಿದೆ.

English summary
Madhya Pradesh Chief minister Shivraj Singh Chouhan will not like this. But Madhya Pradesh Council for Science and Technology(Mapcost) Website has BIOTAB Product advertisement large variety of pills to both men and women for sensual enhancement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X