ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವತಿ ಮೇಲೆ ಅತ್ಯಾಚಾರ, ದರೋಡೆ, ಪೊಲೀಸರಿಗೆ ಸಂಶಯ

By Srinath
|
Google Oneindia Kannada News

ಬೆಂಗಳೂರು, ಜುಲೈ24: ಒಂಟಿ ಯುವತಿಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಹಣ ಹಾಗೂ ಚಿನ್ನಾಭರಣ ದೋಚಿರುವ ಘಟನೆ ಜೀವನ್‌ಬಿಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್‌ಎಎಲ್ ಬಡಾವಣೆಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಎಚ್.ಆರ್ ಮ್ಯಾನೇಜರ್ ಆಗಿರುವ 33 ವರ್ಷದ ಪೂಜಾ ಮೆಹ್ರಾ ಅತ್ಯಾಚಾರಕ್ಕೆ ಒಳಗಾದವರು.

ಪೂಜಾ, ಎಚ್‌ಎಎಲ್ ಬಡಾವಣೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದಾರೆ. ರಾತ್ರಿ 2.30ರ ಸುಮಾರಿಗೆ ಅವರ ಮನೆಯೊಳಗೆ ನುಗ್ಗಿದ ಮೂವರು ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಬೆದರಿಸಿದ್ದಾರೆ. ಪೂಜಾ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ನಂತರ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಅವರ ಚಿನ್ನದ ಉಂಗುರ ಮತ್ತು ಅಲ್ಮೇರಾದಲ್ಲಿದ್ದ ನಾಲ್ಕು ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಪೂಜಾರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಗೆ ನುಗ್ಗಿದವರು ಅಪರಿಚಿತ ಯುವಕರು ಎಂದು ಪೂಜಾ ತಿಳಿಸಿದ್ದಾರೆ. ತೀವ್ರ ಅಘಾತಕ್ಕೊಳಗಾಗಿರುವ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿಲ್ಲ. ಅವರು ಚೇತರಿಸಿಕೊಂಡ ಬಳಿಕ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಪ್ರಕರಣ ಗೋಜಲುಗೋಜಲಾಗಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿವೆ. ಪೂಜಾ ಹೇಳುವ ಪ್ರಕಾರ ಶುಕ್ರವಾರ ಬೆಳಗಿನ ಜಾವ 2.30ರಲ್ಲಿ ತನ್ನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಯಾರೋ ಬಂದು ಬಾಗಿಲು ಬಡಿದರು. ಸ್ನೇಹಿತರು ತರಬಹುದೆಂದು ಸಡನ್ ಆಗಿ ಬಾಗಿಲು ತೆರೆದೆ ಎಂದಿದ್ದಾರೆ. ಜತೆಗೆ ಪೂಜಾ ಮೊದಲ ಮಹಡಿಯಲ್ಲಿ ವಾಸವಾಗಿದ್ದು, ಪೊಲೀಸರು ತನಿಖೆಗೆಂದು ಸ್ಥಳಕ್ಕೆ ಬಂದಾಗಲಷ್ಟೇ ನೆರೆಮನೆಯವರಿಗೆ ಘಟನೆ ಬಗ್ಗೆ ತಿಳಿದುಬಂದಿದೆ. ಪೊಲೀಸರು ಪೂಜಾಳ ಮೊಬೈಲಿನ ಕಾಲ್ ಡೀಟೆಲ್ಸ್ ಪರಿಶೀಲಿಸುತ್ತಿದ್ದಾರೆ.

ಬಾಧಿತ ಯುವತಿ ಉತ್ತರ ಭಾರತದವರು. ಖಾಸಗಿ ಕಂಪನಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರ ಪೂರ್ವಾಪರಗಳ ಬಗ್ಗೆ ತಿಳಿದುಕೊಂಡಿದ್ದ ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಅವರು ಮನೆಯಲ್ಲಿ ಒಬ್ಬರೇ ಇರುತ್ತಾರೆ ಎಂದು ಖಚಿತಪಡಿಸಿಕೊಂಡೇ ರಾತ್ರಿ ಮನೆಗೆ ನುಗ್ಗಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ವಿರುದ್ಧ ಜೀವನ್‌ಬಿಮಾನಗರ ಠಾಣೆಯಲ್ಲಿ ಅತ್ಯಾಚಾರ, ಕೊಲೆ ಯತ್ನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ.

English summary
A 33-year-old HR manager alleged that three unknown miscreants raped her at gun point in her residence and also they have decamped with a gold ring and Rs 4,000 cash in Jeevan Bimanagar police station limits in Bangalore on July 22 at 2.30 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X