ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಲೇ ಪಿಡಬ್ಲ್ಯೂಡಿ ಸ್ವಾಮಿ ಅಂಡ್ ಹಿಸ್ ವೈಫ್!

By Prasad
|
Google Oneindia Kannada News

Lokayukta raid corrupt officials
ಬೆಂಗಳೂರು, ಜು. 23 : ಅಕ್ರಮ ಗಣಿಗಾರಿಕೆಯ ವರದಿ ಯಾವಾಗ ಬರುತ್ತೋ ಎಂದು ರಾಜ್ಯದ ಜನತೆಯೆಲ್ಲ ಕಾದು ಕುಳಿತಿರುವಾಗ ಅಕ್ರಮ ಆಸ್ತಿ ಗಳಿಸಿರುವ 8 ಭ್ರಷ್ಟ ಸರಕಾರಿ ನೌಕರರ ಮೇಲೆ ರಾಜ್ಯಾದ್ಯಂತ ದಾಳಿ ನಡೆಸಿದ್ದು, 10 ಕೋಟಿ ರು.ಗೂ ಹೆಚ್ಚಿನ ಆಸ್ತಿಯನ್ನು ಲೋಕಾಯುಕ್ತ ನ್ಯಾ. ಸಂತೋಷ ಹೆಗಡೆ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಬಾಗಲಕೋಟೆ, ಬೀದರ್, ಕೋಲಾರ, ತುಮಕೂರು ಮತ್ತು ರಾಯಚೂರು ಜಿಲ್ಲೆಯಲ್ಲಿ ಶುಕ್ರವಾರ ದಾಳಿ ನಡೆಸಲಾಗಿದೆ.

ಹಿರಿಯ ಮತ್ತು ಮಧ್ಯಮ ಶ್ರೇಣಿಯ ಭ್ರಷ್ಟಾತಿಭ್ರಷ್ಟ ಅಧಿಕಾರಿಗಳು ಮತ್ತು ಶ್ರೀಮಂತ ಗುಮಾಸ್ತರು ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಅಧಿಕಾರಿಗಳು ಮತ್ತು ಅವರಿಂದ ವಶಪಡಿಸಿಕೊಳ್ಳಲಾದ ಆಸ್ತಿಯ ವಿವರಗಳನ್ನು ಹೆಗಡೆ ಶುಕ್ರವಾರ ನೀಡಿದರು.

ಹಣ ಗುಳುಂ ಮಾಡಿದವರು

* ಸಿ. ಮೃತ್ಯುಂಜಯ ಸ್ವಾಮಿ, ಬೆಂಗಳೂರು - ಲೋಕೋಪಯೋಗಿ ಸೆಕ್ರೆಟರಿ.
* ರಾಘವ ಪಟಾಲಿ, ಬೆಳ್ತಂಗಡಿ, ದಕ್ಷಿಣ ಕನ್ನಡ - ಅರಣ್ಯ ಸಂರಕ್ಷಣಾಧಿಕಾರಿ.
* ವಿರೂಪಾಕ್ಷಪ್ಪ, ದಾವಣಗೆರೆ - ಲೋಕೋಪಯೋಗಿ ಎಕ್ಸಿಕ್ಯೂಟಿವ್ ಇಂಜಿನಿಯರ್.
* ಸುರೇಶ್ ನಿಂಗಪ್ಪ ಗೌಡರ್, ಹುನಗುಂದ, ಬಾಗಲಕೋಟೆ - ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್.
* ಬಸವರಾಜ್ ವರವಟ್ಟಿ, ಬೀದರ - ಮಕ್ಕಳ ಯೋಜನಾಧಿಕಾರಿ.
* ಗೋಪಾಲ್, ಕೋಲಾರ - ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್.
* ಎಲ್ ಮೈಲಾರಯ್ಯ, ತುಮಕೂರು - ಎಪಿಎಮ್ಸಿ ಗುಮಾಸ್ತ.
* ಅಬ್ದುಲ್ ಗನಿ, ರಾಯಚೂರು - ಸ್ಥಳೀಯ ಸಂಸ್ಥೆ ಸೆಕ್ರೆಟರಿ.

ಇವರಲ್ಲಿ ತಿಮಿಂಗಲೆಂದರೆ ಮೃತ್ಯುಂಜಯ ಸ್ವಾಮಿ. 1992ರಿಂದ ಅವರ ಮತ್ತು ಅವರ ಧರ್ಮಪತ್ನಿಯ ಸಂಬಳವನ್ನು ಒಟ್ಟುಗೂಡಿಸಿದರೆ 95 ಲಕ್ಷ ದಾಟುವುದಿಲ್ಲ. ಆದರೆ, ಅವರು ಮಾಡಿಟ್ಟಿರುವ ಆಸ್ತಿ ಮನೆ, ಫ್ಲಾಟ್, ವಾಣಿಜ್ಯ ಸಂಕಿರ್ಣ, ಬ್ಯಾಂಕ್ ಬ್ಯಾಲನ್ಸ್, ಬೆಳ್ಳಿ ಬಂಗಾರಗಳನ್ನು ಗುಡ್ಡೆ ಹಾಕಿದರೆ ಅದು 5.95 ಕೋಟಿ ರು. ದಾಟುತ್ತಿದೆ. ಭಲೇ ಸ್ವಾಮಿ ಅಂಡ್ ಹೀಸ್ ವೈಫ್!

ಈ ಅಕ್ರಮ ಆಸ್ತಿ ಗಳಿಸಿಕೊಂಡ ಶ್ರೀಮಂತರನ್ನು ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಸೂಕ್ರ ಕ್ರಮ ಜುರುಗಿಸಬೇಕು ಎಂದು ಸರಕಾರಕ್ಕೆ ಶಿಫಾರಸು ಮಾಡಿರುವುದಾಗಿ ಸಂತೋಷ ಹೆಗಡೆ ಹೇಳಿದರು.

English summary
When whole is Karnataka is looking ahead for the submission of Lokayukta report on illegal mining in Karnataka, Lokayukta Santosh Hegde and his team raided 8 corrupt officials all over Karnataka and seized Rs. 10 cr worth property.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X