ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರನೇ ಐತಿಹಾಸಿಕ ಕದನಕ್ಕೆ ವೇದಿಕೆ ಸಜ್ಜು

By Prasad
|
Google Oneindia Kannada News

Hansraj Bhradwaj vs Yeddyurappa
ಬೆಂಗಳೂರು, ಜು. 23 : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ನಡುವಿನ ಮೂರನೇ ಐತಿಹಾಸಿಕ ಕದನಕ್ಕೆ ಕರ್ನಾಟಕ ಸಿದ್ಧವಾಗುತ್ತಿದೆ. ಎರಡು ಬಾರಿ ಸಣ್ಣಪುಟ್ಟ ಗಾಯಗಳಾಗಿ ಪಾರಾಗಿದ್ದ ಯಡಿಯೂರಪ್ಪ ಮೂರನೇ ಬಾರಿ ಬಚಾವಾಗುತ್ತಾರಾ? ಈ ಬಾರಿ ರಾಜ್ಯಪಾಲರು ಅಂತಿಮ ನಗು ನಕ್ಕರೂ ಆಶ್ಚರ್ಯವಿಲ್ಲ.

ಲೋಕಾಯುಕ್ತ ನ್ಯಾ. ಸಂತೋಷ ಹೆಗಡೆ ಅವರಿಂದ ಅಕ್ರಮ ಗಣಿಗಾರಿಕೆಯ ವರದಿ ಬರುವುದನ್ನೇ ಭಾರದ್ವಾಜ್ ಕಾಯುತ್ತಿದ್ದಾರೆ. ಬಂದ ಕೂಡಲೆ ಕೂಲಂಕಷವಾಗಿ ವರದಿಯನ್ನು ಪರಿಗಣಿಸಿ ಮುಂದಿನ ಕ್ರಮ ಜರುಗಿಸುವುದಾಗಿ ಅವರು ಶುಕ್ರವಾರ ಹೇಳಿದ್ದಾರೆ. ಸದ್ಯಕ್ಕೆ, ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಜರುಗಿಸಲು ಅಧಿಕಾರ ಇರುವುದು ರಾಜ್ಯಪಾಲರಿಗೊಬ್ಬರಿಗೆ.

ಸೋರಿಕೆಯಾಗಿರುವ ಅಕ್ರಮ ಗಣಿಗಾರಿಕೆ ವರದಿಯ ಪ್ರಕಾರ, ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು, ವಿಸೋಮಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನ ಅನಿಲ್ ಲಾಡ್ ಅವರು ಭಾಗಿಯಾಗಿದ್ದಾರೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ನಿಯಮ 12 ಮತ್ತು 13ರ ಪ್ರಕಾರ ಯಡಿಯೂರಪ್ಪ ವಿರುದ್ಧ ಕ್ರಮ ಜರುಗಿಸಲು ರಾಜ್ಯಪಾಲರಿಗೆ ಅಧಿಕಾರವಿದೆ.

ಬಲ್ಲ ಮೂಲಗಳ ಪ್ರಕಾರ, ಸೋಮವಾರ ಜು.25ರಂದು ಸಂತೋಷ ಹೆಗಡೆಯವರು ಅಕ್ರಮ ಗಣಿಗಾರಿಕೆಯ ಅಂತಿಮ ವರದಿಯನ್ನು ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ. ಆದರೆ, ಅಷ್ಟರೊಳಗೆ ಯಡಿಯೂರಪ್ಪ ಮಾರಿಷಸ್ ನಿಂದ ವಾಪಸ್ ಬರುವ ಲಕ್ಷಣಗಳಿಲ್ಲ. ಅವರು ಮಾರಿಷಸ್ ನಿಂದ ನೇರವಾಗಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಬೆಂಗಳೂರಿಗೆ ಮರಳಲಿದ್ದಾರೆ.

English summary
The deck is getting ready for 3rd battle between Governor Hansraj Bhardwaj and Chief Minister BS Yeddyurappa. BSY may not be lucky for the third time. Bhardwaj has full authority under Karnataka Lokayukta Act, 1984 to initiate action against CM if he is found guilty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X