ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚ್ ದಾಳಿ ಕೇಸು ಹಿಂದಕ್ಕೆ ಪಡೆಯಲು ಮನವಿ

By * ಚಿದಂಬರ ಬೈಕಂಪಾಡಿ, ಮಂಗಳೂರು
|
Google Oneindia Kannada News

Church attack in Mangalore
ಮಂಗಳೂರು, ಜು. 23 : ಮಂಗಳೂರು ಬಿಷಪ್ ನೇತೃತ್ವದ ನಿಯೋಗ ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ 2008 ಚರ್ಚ್ ದಾಳಿಗೆ ಸಂಬಂಧಪಟ್ಟ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸುವ ಮನವಿ ಅರ್ಪಿಸಿತು.

ರಾಜ್ಯ ಸರ್ಕಾರ ಈಗಾಗಲೇ ಚರ್ಚ್ ಮೇಲಿನ ದಾಳಿ ಘಟನೆಗಳ ಕೇಸುಗಳನ್ನು ಹಿಂದಕ್ಕೆ ಪಡೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ ಮೇಲೂ ಈ ಕೇಸುಗಳಿಗೆ ಸಂಬಂಧಪಟ್ಟು ಸಮನ್ಸಗಳು ಜಾರಿಯಾಗುತ್ತಿರುವ ಬಗ್ಗೆ ನಿಯೋಗ ಕಮಿಷನರ್ ಗಮನ ಸೆಳೆಯಿತು.

ನಂತರ ಮಾತನಾಡಿದ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಮುಖ್ಯಮಂತ್ರಿಗಳು ನಾಲ್ಕು ತಿಂಗಳುಗಳ ಹಿಂದೆಯೇ ಕೇಸುಗಳನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದರೂ ಅದು ಅನುಷ್ಠಾನವಾಗಿಲ್ಲವೆಂದು ವಿಷಾದಿಸಿದರು. ಈ ನಿಯೋಗದಲ್ಲಿ ಫಾ.ಥೋಮಸ್ ಡಿಸಿಲ್ವಾ, ಫಾ.ಜೆ.ಬಿ.ಕ್ರಾಸ್ತಾ,, ಐವನ್ ಡಿಸೋಜಾ ಸಹಿತ ಪ್ರಮುಖರಿದ್ದರು.

English summary
A delegation of christians headed by Mangalore bishop met district police commissioner Simanth Kumar Singh and urged him to withdraw criminal cases filed against few christians, as per the direction of Chief Minister of Karnataka BS Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X