ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ 26 ಕ್ಯಾಬರೆ ನರ್ತಕಿಯರ ಬಂಧನ

By Rajendra
|
Google Oneindia Kannada News

26 bar girls arrest in Bangalore
ಬೆಂಗಳೂರು, ಜು.23: ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸರಬರಾಜು ಮಾಡುತ್ತಾ ಅಶ್ಲೀಲ ನೃತ್ಯ ಮಾಡಿ ಪಾನಮತ್ತ ಗಿರಾಕಿಗಳಿಗೆ ಮತ್ತಷ್ಟು ಕಿಕ್ ನೀಡುತ್ತಿದ್ದ ಒಟ್ಟು 26 ಮಂದಿ ಮಹಿಳೆಯರನ್ನು ಸೆಂಟ್ರಲ್ ಕ್ರೈಂ ಬ್ರಾಂಬ್ ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿಧ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿಈ ದಾಳಿ ನಡೆದಿದೆ.

ಅಶ್ಲೀಲ ನೃತ್ಯ ಮಾಡಿ ಗಿರಾಕಿಗಳಿಗೆ ಉತ್ತೇಜಿಸುತ್ತಿದ್ದ 22 ಬಾರ್ ಗರ್ಲ್‌ಗಳು ಹಾಗೂ ಅವರನ್ನು ಬಲವಂತವಾಗಿ ಈ ಕೆಲಸಕ್ಕ್ಕೆ ನೂಕಿದ್ದ ನಾಲ್ಕು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಲ್ಲಿ ನೇಪಾಳ, ಮುಂಬೈ, ಪಂಜಾಬ್ ಹಾಗೂ ದೆಹಲಿ ಮೂಲದ 19 ಮಂದಿ ಮಹಿಳೆಯರು ಇದ್ದಾರೆ.

ಎಸ್ ಆರ್ ನಗರದ ಪಲ್ಲವಿ ಚಿತ್ರಮಂದಿರ ಬಳಿಯ ಫೋರ್ ಸೀಸನ್ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂಆರ್‌ಎಂವಿ ಬಡಾವಣೆಯ ಚೆಫ್ ಇನ್ ಡಿಲಕ್ಸ್ ಬಾರ್ ಅಂಡ್ ರೆಸ್ಟೋರೆಂಟ್‍ಗಳ ಮೇಲೆ ಸಿಸಿಬಿ ಪೊಲೀಸರು ಗುರುವಾರ ರಾತ್ರಿ ದಾಳಿ ನಡೆಸಿ ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ 26 ಮಂದಿಯನ್ನು ಬಂಧಿಸಿದ್ದಾರೆ.

ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಬಾರ್‌ಗಳಲ್ಲಿ ಮಹಿಳೆಯ ಸೇವೆಗೆ ಮೌಕಿಕವಾಗಿ ಅನುಮತಿ ನೀಡಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಕೆಲವು ಬಾರ್ ಅಂಡ್ ರೆಸ್ಟೋರೆಂಟ್‌ಗಳು ಅಶ್ಲೀಲ ನೃತ್ಯಗಳನ್ನು ಆಯೋಜಿಸಿ ಹಣ ಮಾಡುವ ದಂಧೆಗೆ ಇಳಿದಿದ್ದವು.

ಈ ಅಶ್ಲೀಲ ನೃತ್ಯಕ್ಕೆ ಪ್ರಚೋದಿಸುತ್ತಿದ್ದ ಯಲಹಂಕ ನಿವಾಸಿ ಹಾಗೂ ಶಿವಮೊಗ್ಗ ಮೂಲದ ಎಚ್ ಎಸ್ ಸತೀಶ್ (30), ಗಂಗಾನಗರ ನಿವಾಸಿ ಜಿ ರವಿ (38), ತಮಿಳಿನಾಡು ಮೂಲದವರಾದ ಲೋಕನಾಥ್ (39) ಹಾಗೂ ಮಣಿಕಂಠ (26) ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. (ದಟ್ಸ್‌ಕನ್ನಡ ವಾರ್ತೆ)

English summary
The Bangalore central crime branch (CCB) police raided two bars in the city and arrested 26 persons. While 22 bar girls were arrested for performing 'obscene acts,' four men were held in connection with forcing the girls to attract customers with obscenity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X