ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೌದು, ಈ ಭೂಮಿ ಮೇಲೆ ಬರೋಬ್ಬರಿ 700 ಕೋಟಿ ಜನ ಇದ್ದಾರೆ

By Srinath
|
Google Oneindia Kannada News

World Population Day-2011
ಲಂಡನ್‌, ಜುಲೈ22: ಪ್ರಸ್ತುತ ಪ್ರತಿ ಸೆಕೆಂಡಿಗೆ ಐದರಂತೆ ಶಿಶುಗಳ ಜನನವಾಗುತ್ತಿದ್ದು, ಇದೇ ಅಕ್ಟೋಬರ್ ಅಂತ್ಯದ ವೇಳೆಗೆ ವಿಶ್ವದ ಜನಸಂಖ್ಯೆ 700 ಕೋಟಿ ದಾಟುವ ಅಂದಾಜಿದೆ. 2030ರ ವೇಳೆಗೆ ಅದು 900 ಕೋಟಿ ತಲುಪುವ ನಿರೀಕ್ಷೆಯಿದೆ. ಅಂದಹಾಗೆ ಮೊನ್ನೆ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಿದಾಗ ಈ ಮಾಹಿತಿ ಬಹಿರಂಗವಾಗಿದೆ.

ದಶಕದ ಹಿಂದೆ ವಿಶ್ವದ ಜನಸಂಖ್ಯೆ 600 ಕೋಟಿಯಷ್ಟಿತ್ತು. ಆದರೆ ಪ್ರತಿ ಸೆಕೆಂಡಿಗೆ ಐದು ಮಕ್ಕಳ ಜನನದೊಂದಿಗೆ ಪ್ರತಿ ವರ್ಷ ವಿಶ್ವ ಸಮುದಾಯಕ್ಕೆ ಹೊಸದಾಗಿ 7.80 ಕೋಟಿ ಜನ ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತಿದ್ದಾರೆ. ಇದರ ಫಲವಾಗಿ, ಮುಂದಿನ ಅಕ್ಟೋಬರ್ ಅಂತ್ಯಕ್ಕೆ ವಿಶ್ವದ ಜನಸಂಖ್ಯೆ 700 ಕೋಟಿ ತಲುಪಲಿದೆ ಎಂದು ಡೈಲಿ ಮೇಲ್‌ ವರದಿ ಮಾಡಿದೆ.

1960ರಲ್ಲಿ ವಿಶ್ವದ ಒಟ್ಟು ಜನಸಂಖ್ಯೆ 300 ಕೋಟಿಗಳಷ್ಟಿತ್ತು. 1999ರ ವೇಳೆಗೆ ಅದು 600 ಕೋಟಿಗೆ ತಲುಪಿತ್ತು. 2021ರ ವೇಳೆಗೆ ಅದು 800 ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ವಿಶ್ವ ಸಂಸ್ಥೆಯ ಅಂಕಿ-ಅಂಶಗಳು ತಿಳಿಸಿವೆ. ಬಡ ರಾಷ್ಟ್ರಗಳಲ್ಲಿಯೇ ಸಾಮಾನ್ಯವಾಗಿ ಜನಸಂಖ್ಯೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಮುಂದಿನ ಒಂದು ದಶಕದಲ್ಲಿ ಅದು ದುಪ್ಪಟ್ಟು ಆಗುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.

English summary
The population explosion has been rising steadily. It rose to 600 crores in 1999. This year on October 31, it is projected to touch the 700-crore mark. The United Nations has predicted that the population will rise to 800 crores in 2021 and 900 crores in 2030.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X