ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸ ತೋರಿಸಿ ಬಹುಮಾನ ಗೆಲ್ಲಿ: ಬಿಬಿಎಂಪಿ ಸಕತ್ ಐಡಿಯಾ

By Mahesh
|
Google Oneindia Kannada News

R Ashok
ಬೆಂಗಳೂರು, ಜು.22: ನಿಮ್ಮ ಮನೆ, ಅಂಗಡಿ, ಪಾರ್ಕು, ಗಲ್ಲಿಗಳ ಸಂದಿಗೊಂದಿಗಳಲ್ಲಿ ಯಾರಾದರೂ ಕಸ ಸುರಿಯುತ್ತಿರುವುದನ್ನು ಕಂಡರೆ ತಕ್ಷಣ ಅದರ, ಅವರ ಫೋಟೋ ಅಥವಾ ವಿಡಿಯೋ ತೆಗೆದುಬಿಡಿ. ಒಂದ್ನಿಮಿಷ : ಕೀಪ್ ಯುವರ್ ಮೊಬೈಲ್ ಕ್ಯಾಮರಾ ರೆಡಿ ಟು ಶೂಟ್.

ಫೋಟೋ ತೆಗೆದು ಬಿಬಿಎಂಪಿಗೆ ಕಳಿಸಿದರೆ ಪಾಲಿಕೆಯಿಂದ 2 ಸಾವಿರ ರೂ.ಗಳ ಬಹುಮಾನ ಪಡೆಯುವ ಛಾನ್ಸ್ ನಿಮ್ಮದು. ನಗರದಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿಯುವುದನ್ನು ಕಟ್ಟುನಿಟ್ಟಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಭೇಷ್ ಮೈ ಡಿಯರ್ ಬಿಬಿಎಂಪಿ.

ಈ ಸ್ಕೀಮ್ ನಲ್ಲಿ ಎರಡನೇ ವ್ಯಕ್ತಿಯಾಗಿ ಬಹುಮಾನ ಗಿಟ್ಟಿಸಿಕೊಂಡವರು ನವರಸ ನಾಯಕ ಜಗ್ಗೇಶ್. ಕಾಡು ಮಲ್ಲೇಶ್ವರ ವಾರ್ಡ್ ವ್ಯಾಪ್ತಿಯ ಎಂಕೆಕೆ ರಸ್ತೆಯ ರೈಲು ಕೆಳಮಾರ್ಗದಲ್ಲಿ ಲಾರಿಯೊಂದರಿಂದ ತ್ಯಾಜ್ಯ ಸುರಿಯುವುದನ್ನು ಗಮನಿಸಿದ ಜಗ್ಗೇಶ್, ತಕ್ಷಣವೇ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ.

ಅನಧಿಕೃತವಾಗಿ ಕಸ ಬಿಸಾಕಿದ ಆರೋಪದ ಮೇಲೆ ಬಸವರಾಜು ಎಂಬುವರಿಂದ 10,000 ರೂ. ದಂಡ ವಸೂಲಿ ಮಾಡಲಾಗಿದೆ. ಇವೇ ಮುಂತಾದ "ನಿಮ್ಮ ನಗರವನ್ನು ಸ್ವಚ್ಛವಾಗಿಡಿ" ಆಂದೋಲನದ ವಿವರಗಳನ್ನು ಸಚಿವ ಅಶೋಕ ಪ್ರಕಟಿಸಿದ್ದಾರೆ.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬುಧವಾರ ಸಚಿವ ಆರ್.ಅಶೋಕ ಅವರು ಜಗ್ಗೇಶ್‌ಗೆ ಬಹುಮಾನದ ಚೆಕ್ ನೀಡಿದ್ದಾರೆ. ಸಾರ್ವಜನಿಕರು ಕೂಡಾ ಇದೇ ರೀತಿ ಅನಧಿಕೃತವಾದ ತ್ಯಾಜ್ಯ ಸುರಿಯುತ್ತಿರುವುದು ಕಂಡು ಬಂದರೆ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು. ಅಂದಹಾಗೆ ಈ ಸ್ಕೀಮ್ ನಲ್ಲಿ ಬಹುಮಾನ ಪಡೆದ ಮೊದಲಿಗ ಬಸವೇಶ್ವರನಗರ ನಾಗಪುರ ವಾರ್ಡ್ ನ ನಿವಾಸಿ ಕುಶಾಲ್.

ಈ ದೂರವಾಣಿ ಸಂಖ್ಯೆಗಳನ್ನು ಬರೆದಿಟ್ಟುಕೊಳ್ಳಿ ಅಥವಾ ಈ ಪೇಜ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ:

ಕೇಂದ್ರ ಕಚೇರಿ- (080)2222 1188/ 22975595;
ಪೂರ್ವ- 2297 5803; ಪಶ್ಚಿಮ- 2346 3366;
ದಕ್ಷಿಣ- 2656 6362;
ಬ್ಯಾಟರಾಯನಪುರ- 2363 6671;
ಮಹದೇವಪುರ- 2851 2300;
ಬೊಮ್ಮನಹಳ್ಳಿ- 2573 5642;
ರಾಜರಾಜೇಶ್ವರಿನಗರ- 2860 0954;
ದಾಸರಹಳ್ಳಿ- 2839 3688.

ಬೃಹತ್ ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಅಕ್ರಮವಾಗಿ ಸುಮಾರು 10 ಸಾವಿರ ಟನ್ ಕಸವನ್ನು ಬೆಕಾಬಿಟ್ಟಿಯಾಗಿ ಸುರಿಯಲಾಗುತ್ತಿದೆ. ಈ ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಸುಮಾರು 100 ಕೋಟಿ ಖರ್ಚು ಮಾಡುತ್ತಿದೆ. ಹಾಗಾಗಿ ಕಸ ನಿರ್ವಹಣೆ, ನಿಯಂತ್ರಣ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅಶೋಕ್ ವಿನಂತಿಸಿಕೊಂಡಿದ್ದಾರೆ. ಬಹುಮಾನ ಪಡೆಯುವ ಮೂರನೇ ಬೆಂಗಳೂರಿಗ ನೀವಾಗಬಹುದು. ರೆಡಿ ನಾ?

English summary
Bruhat Bangalore Mahanagara Palike (BBMP) has started a innovative way to tackle the problem of illegal dumping of garbage at public places. A new initiative where in residents who snap and submit the pictures of vehicles dumping garbage will be rewarded with handsome amount of Rs. 2000. The scheme is open to all the citizens of Bangalore except government servants said Home minister R Ashok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X