ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಗುರುತಿನ ಚೀಟಿ ನಕಲಿ ಮಾಡೋದು ಅಷ್ಟು ಸುಲಭವೇ?

By Mahesh
|
Google Oneindia Kannada News

Fake UID Network Busted in Bangalore
ಬೆಂಗಳೂರು ಜು 21: ಆಧಾರ್ ಯೋಜನೆಯ ಆಧಾರಕ್ಕೆ ಕೊಡಲಿ ಪೆಟ್ಟು ಕೊಡುವಂಥ ನಕಲಿ ಜಾಲವನ್ನು ನಗರದ ಪೊಲೀಸರು ಬೇಧಿಸಿದ್ದಾರೆ. ಆಧಾರ್ ಗುರುತಿನ ಚೀಟಿ (ಯುಐಡಿ)ಗಳನ್ನು ತಯಾರಿಸುತ್ತಿದ್ದ ಐದು ಮಂದಿ ವಂಚಕರನ್ನು ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆಧಾರ್ ಯೋಜನೆಯ ಉಪನಿರ್ದೇಶಕ ಅಶೋಕ ಅವರು ನೀಡಿದ ದೂರಿನ ಮೇರೆಗೆ, ಬನಶಂಕರಿ ಮೂರನೇ ಹಂತ ಹೊಸಕೆರೆಹಳ್ಳಿಯಲ್ಲಿ ಕಚೇರಿ ಹೊಂದಿದ್ದ ಗ್ಲೋಬಲ್ ಐಡಿ ಸಲ್ಯೂಷನ್ಸ್‌ನ ಪ್ರಾಣೇಶ್ (34), ಚಂಗರಾಜು (37), ಶಿವಾನಂದ ಶರ್ಮ (30), ಪೂರ್ಣಾನಂದ (35) ಮತ್ತು ಶಂಕರ ಶರವಣನ್ ಬಂಧಿತರು. ವಿನಯ್ ಚಾವ್ಲಾ, ಆನಂದ್ ಹಾಗೂ ಕಾರ್ತಿಕ್ ಎಂಬುವರು ನಾಪತ್ತೆಯಾಗಿದ್ದಾರೆ.

ಅವರಿಂದ 1,500 ಆಧಾರ್ ಕಾರ್ಡುಗಳು ಮತ್ತು ತಯಾರಿಕೆಗೆ ಬಳಸುತ್ತಿದ್ದ ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಐಪಿಸಿ ಸೆಕ್ಷನ್ 419, 468, 471 ಹಾಗೂ 420 ಅನ್ವಯ ಕೇಸ್ ಹಾಕಲಾಗಿದೆ. ಹಲವೆಡೆ ಫ್ರಾಂಚೈಸಿಗಳನ್ನು ತೆರೆಯಲು 2.5 ಲಕ್ಷ ರೂ ಬೇಡಿಕೆ ಒಡ್ಡುತ್ತಿದ್ದರು ಎಂದು ತಿಳಿದು ಬಂದಿದೆ.

English summary
The Bangalore city High grounds police on Wednesday arrested five persons for issuing unique identification (UID) bearing fake Aadhaar logos and numbers. The arrests took place after officials of UIDAI filed a complaint with the city police regarding some miscreants issuing fake UID number
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X