ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಸಿರುಗಟ್ಟಿರುವ ಬೆಂಗಳೂರಿಗೆ 40 ಸಾವಿರ ಹೆಚ್ಚು ಆಟೋ

By Prasad
|
Google Oneindia Kannada News

Overcrowded Bangalore roads to get 40k more autos
ಬೆಂಗಳೂರು, ಜು. 20 : ನಗರದ ವಾಯುಮಾಲಿನ್ಯವನ್ನು ತಗ್ಗಿಸುವ ದೃಷ್ಟಿಯಿಂದ 2000 ಇಸವಿಗೂ ಮೊದಲು ರಿಜಿಸ್ಟರ್ ಮಾಡಲಾಗಿದ್ದ 2-ಸ್ಟ್ರೋಕ್ ಇಂಜಿನ್ ಇರುವ ಹಳೆ ಆಟೋಗಳನ್ನು ಮಾರಿದವರಿಗೆ 15,000 ರು. ನಗದನ್ನು ಬಹುಮಾನವಾಗಿ ನೀಡಲಾಗುವುದು ಎಂದು ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ಘೋಷಿಸಿದ್ದಾರೆ.

"2-ಸ್ಟ್ರೋಕ್ ಇಂಜಿನ್ ಇರುವ ಹಳೆ ಆಟೋಗಳು ಮಾಲಿನ್ಯ ಹೆಚ್ಚಿಸುತ್ತಿವೆ. ಅಲ್ಲದೆ, ನಾಗರಿಕರು ಕೂಡ 4-ಸ್ಟ್ರೋಕ್ ಇಂಜಿನ್ ಇರುವ 'ಗ್ರೀನ್ ಆಟೋ'ಗಳನ್ನೇ ಜಾರಿಗೆ ತರಬೇಕೆಂದು ಶಿಫಾರಸು ಮಾಡುತ್ತಿದ್ದಾರೆ. ಹಳೆ ಮೀಟರುಗಳಿಂದ ಮೋಸವಾಗುತ್ತಿರುವ ಬಗ್ಗೆಯೂ ದೂರುಗಳು ಬಂದಿವೆ" ಎಂದು ಅಶೋಕ್ ಮಂಗಳವಾರ ಬೆಂಗಳೂರಿನಲ್ಲಿ ನುಡಿದರು.

ಇದೇ ನಿಟ್ಟಿನಲ್ಲಿ 40 ಸಾವಿರ ಹೆಚ್ಚಿಗೆ 'ಗ್ರೀನ್ ಆಟೋ'ಗಳಿಗೆ ನಗರದಲ್ಲಿ ಓಡಿಸಲು ಪರವಾನಗಿ ನೀಡಲು ಚಿಂತಿಸಲಾಗುತ್ತಿದೆ. ಹಾಗೆಯೆ, ಇನ್ನು ಮುಂದೆ ಗ್ರೀನ್ ಆಟೋ ಓಡಿಸುವವರು ಪರ್ಮಿಟ್ ಗಾಗಿ 30,000 ರು. ಬದಲಾಗಿ ಕೇವಲ 300 ರು. ನೀಡಬೇಕಾಗುತ್ತದೆ. ಹಳೆ ಆಟೋಗಳು ತೊಲಗಿ ಗ್ರೀನ್ ಆಟೋಗಳು ಬಂದರೆ ಶೇ.50ರಷ್ಟು ಮಾಲಿನ್ಯ ನಿಯಂತ್ರಣಕ್ಕೆ ಬರುತ್ತದೆ ಎಂದು ಅಶೋಕ್ ಅಭಿಪ್ರಾಯಪಟ್ಟರು.

ವಾಹನ ಸಂಖ್ಯಾಸ್ಫೋಟದಿಂದ ಉಸಿರುಗಟ್ಟಿರುವ ಬೆಂಗಳೂರಿಗೆ 40,000 ಹೆಚ್ಚಿಗೆ ಆಟೋಗಳು ಬೇಕಾ? ಸರಕಾರ ನೀಡುವ 15,000 ಬಹುಮಾನದ ಆಸೆಗೆ ಹಳೆ ಮೀಟರ್ ಇರುವ ಆಟೋ ಚಾಲಕರು ತಮ್ಮ ಹಳೆ ವಾಹನವನ್ನು ಮಾರಲು ಮುಂದೆ ಬರುತ್ತಾರಾ? ಇಷ್ಟೊಂದು ಆಟೋಗಳು ರಸ್ತೆಗಿಳಿದರೆ ವಾಯುಮಾಲಿನ್ಯ ನಿಯಂತ್ರಣ ಸಾಧ್ಯವೆ? [ಜು.22ರ ಆಟೋ ಮುಷ್ಕರ ರದ್ದು]

English summary
Already overcrowded Bangalore will get 40,000 more green autos, transport minister R Ashok has announced in Bangalore. Dept would reward Rs. 15K to auto drivers who sell old autos registered before 2000. Will this initiative reduce the air pollution?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X