ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿಮಾನ ಅಪಘಾತ: 75 ಲಕ್ಷ ಪರಿಹಾರಕ್ಕೆ ಕೋರ್ಟ್ ಆದೇಶ

By Srinath
|
Google Oneindia Kannada News

Mangalore Air Crash
ಎರ್ನಾಕುಲಂ, ಜೂನ್ 20: ಮಂಗಳೂರು ವಿಮಾನ ಅಪಘಾತದಲ್ಲಿ ಒಂದು ವರ್ಷದ ಹಿಂದೆ ಮೃತಪಟ್ಟ ಪ್ರಯಾಣಿಕರ ಕುಟುಂಬದವರಿಗೆ ತಲಾ 75 ಲಕ್ಷ ರುಪಾಯಿ ಪರಿಹಾರ ನೀಡುವಂತೆ ಕೇರಳ ಹೈಕೋರ್ಟ್ ಬುಧವಾರ ಆದೇಶಿಸಿದೆ.

ಈ ಹಿಂದೆ ಏರ್ ಇಂಡಿಯಾ ಅತ್ಯಲ್ಪ ಪರಿಹಾರ ನೀಡಿ ಕೈತೊಳೆದುಕೊಂಡಿತ್ತು. ಆದರೆ ಮಾಂಟ್ರಿಯಾಲ್ ಅಂತಾರಾಷ್ಟ್ರೀಯ ಒಪ್ಪಂದದಂತೆ ಕೇರಳ ಹೈಕೋರ್ಟಿನ ನ್ಯಾ. ಪಿ.ಆರ್. ರಾಮಚಂದ್ರ ಮೆನನ್ ಈ ತೀರ್ಪು ನೀಡಿದ್ದಾರೆ.

ದುಬೈನಿಂದ ಮಂಗಳೂರಿಗೆ ಮರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ 2010ರ ಮೇ 22ರ ಶನಿವಾರ ಮುಂಜಾನೆ 6.30ರಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ಅಪಘಾತಕ್ಕೀಡಾಗಿ 160 ಮಂದಿ ಸಾವಪ್ಪಿದ್ದರು.

ಬೋಯಿಂಗ್ 737ವಿಮಾನದಲ್ಲಿ 4 ಹಸುಗೂಸುಗಳು ಸೇರಿದಂತೆ ಒಟ್ಟು 165 ಮಂದಿ ಪ್ರಯಾಣಿಕರಿದ್ದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ರನ್ ವೇನಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು.

English summary
The Kerala High Court in Ernakulam on Wednesday has delivered its judgment on whether one lakh Special Drawing Rights (SDR), roughly Rs 72 lakh, is the minimum or not. Justice P R Ramachandra Menon has clearly said that Rs 72 lakh each should be given to the families of those died in the Mangalore Air Crash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X