ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಡೆಸ್ಟ್ರಾಯ್ ಅಥಾರಿಟಿ ವಿರುದ್ಧ ನ್ಯಾ. ಶೈಲೇಂದ್ರ ವಾಗ್ದಾಳಿ!

By Srinath
|
Google Oneindia Kannada News

BDA hq
ಬೆಂಗಳೂರು, ಜುಲೈ 20: ಬಿಡಿಎ, ಕೆಐಎಡಿಬಿ ಸೇರಿದಂತೆ ಸರ್ಕಾರಿ ಸಂಸ್ಥೆಗಳ ವಿರುದ್ಧ ಈಗಾಗಲೇ ಹಲವು ಬಾರಿ ಕಿಡಿ ಕಾರಿರುವ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್, ಅವುಗಳ ವಿರುದ್ಧ ಮಂಗಳವಾರವೂ ವಾಕ್‌ಸಮರ ಮುಂದುವರಿಸಿದರು.

ನಾಡಪ್ರಭು ಕೆಂಪೇಗೌಡ ಲೇಔಟ್ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಡಿಎ ಎಂದರೆ ಬೆಂಗಳೂರು ಡೆಸ್ಟ್ರಾಯ್ ಅಥಾರಿಟಿ (ಬೆಂಗಳೂರನ್ನು ಹಾಳುಗೆಡಹುತ್ತಿರುವ ಪ್ರಾಧಿಕಾರ) ಎಂದು ಹೊಸದಾಗಿ ವ್ಯಾಖ್ಯಾನಿಸಿದ್ದಾರೆ.

'ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಮೊದಲು ಕೆಐಎಡಿಬಿ ಭ್ರಷ್ಟವಾಗಿತ್ತು. ಬಿಡಿಎ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಎರಡೂ ಸಂಸ್ಥೆಗಳು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿರುವಂತೆ ಗೋಚರವಾಗುತ್ತಿದೆ. ಜಿಲ್ಲಾಧಿಕಾರಿ, ಸಬ್-ರಿಜಿಸ್ಟ್ರಾರು ಸೇರಿದಂತೆ ಎಲ್ಲ ಅಧಿಕಾರಿಗಳೂ ಭ್ರಷ್ಟರಾಗಿದ್ದಾರೆ. 'ಧೂಮಪಾನ ನಿಷೇಧ ಜಾಗ' ಇರುವಂತೆ 'ಭ್ರಷ್ಟಾಚಾರ ವಿರೋಧಿ ಜಾಗ' ಇರಬೇಕಾಗಿದೆ ಎನ್ನಿಸುತ್ತಿದೆ ಎಂದರು.

English summary
Karnataka High Court Justice DV Shylendra Kumar lambasts BDA. DV Shylendra says BDA means Bangalore Destroy Authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X