ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ ಸರಸ: ಗಂಡಿನ ಕರೆಗೆ ಓಗೊಡದ ಹೆಣ್ಣು ಬರ್ಬರ ಹತ್ಯೆ

By Mahesh
|
Google Oneindia Kannada News

Male hippo kills female, Rajkot
ರಾಜ್ ಕೋಟ್, ಜು 19: ಸರಸಕ್ಕೆ ನೋ ಎಂದು ರಸ್ತೆ ಅಭಿವೃದ್ಧಿ ಮಾಡಿಸಿಕೊಂಡ ಹೆಂಗಸರ ಕಥೆ ಓದಿದ್ದೀರಾ, ಸರಸ ಬೇಡ ಎಂದ ಪತಿ ಛಟೀರ್ ಎಂದು ಹೊಡೆದ ಮಹಿಳೆ ಸ್ಟೋರಿ ಗೊತ್ತಿರುತ್ತೆ. ಆದರೆ, ಈ ಕಥೆ ಪ್ರಾಣಿ ಲೋಕದ ಸರಸ ಸಂಭೋಗದ ವಿಷಯಕ್ಕೆ ಸಂಬಂಧಿಸಿದೆ.

ಕಾಮೋದ್ರಿಕ್ತನಾದ ಹಿಪ್ಪೋಪೊಟಮಸ್ ತನ್ನ ಸಂಗಾತಿಯನ್ನು ಸರಸಕ್ಕೆ ಕರೆದಿದೆ. ಆದರೆ, ಒಲ್ಲೆ ಎಂದು ಹೆಣ್ಣು ದೂರ ಸರಿದಿದೆ. ಇದರಿಂದ ಕೋಪಗೊಂಡ ನೀರಾನೆ ತನ್ನ ಸಂಗಾತಿ ಮೇಲೆ ಬಲಾತ್ಕಾರ ಮಾಡಿ, ಹಿಂಸಿಸಿ ಕೊಂದು ಹಾಕಿದೆ.

ಮಾರ್ಚ್ 2010 ರಲ್ಲಿ ಕಾನ್ಪುರದಿಂದ ಸಕ್ಕರ್ ಬಾರ್ಗ್ ಜೂ ಗೆ ಕಾಲಿಟ್ಟ ಈ ಎರಡು ಜೋಡಿ ಜೀವಗಳು ಪ್ರಾಣಿ ಸಂಗ್ರಹಾಲಯದ ಆಕರ್ಷಣೆಯಾಗಿದ್ದವು. ಆದರೆ, ನೆನ್ನೆ ನಡೆದ ಸರಸ ಕಾಳಗದಲ್ಲಿ ಹೆಣ್ಣು ಅಸುನೀಗಿದೆ. ನಮಗೆ ಈ ವಿಷಯ ತಿಳಿದಾಗ ಪರಿಸ್ಥಿತಿ ಕೈ ಮೀರಿತ್ತು.

ತೀವ್ರವಾಗಿ ಗಾಯಗೊಂಡಿದ್ದ ಹೆಣ್ಣು ನೀರಾನೆ ದಾರುಣ ಸ್ಥಿತಿಯಲ್ಲಿತ್ತು. ಅದರ ಕಿಬ್ಬೊಟ್ಟೆಗೆ ಬಲವಾದ ಗಾಯವಾಗಿತ್ತು. ಉಳಿಸಿಕೊಳ್ಳಲು ಎಲ್ಲಾ ರೀತಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಈ ರೀತಿ ನೀರಾನೆ ಉದ್ರೇಕಗೊಳ್ಳುವುದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಜೂ ನಿರ್ವಾಹಕ ವಿಜೆ ರಾಣಾ ಹೇಳಿದ್ದಾರೆ.

English summary
An enraged male hippopotamus at the Sakkarbaug zoo here in Rajkot killed a female hippo last day said the zoo authorities Superintendent of the zoo V J Rana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X