ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಾ ಕೊರಳ ಕುಣಿಕೆ ಬಿಗಿಗೊಳಿಸಿದ ಲೋಕಾಯುಕ್ತ

By Mahesh
|
Google Oneindia Kannada News

Katta Subramanya Naidu
ಬೆಂಗಳೂರು ಜು 19: ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ 9 ಜನರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಡೆಸಿದೆ.ನ್ಯಾಯಲಯಕ್ಕೆ ಗೈರು ಹಾಜರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಜೂ 23ರಂದು ಖುದ್ದು ಹಾಜರಾಗುವಂತೆ ನ್ಯಾಯಮೂರ್ತಿ ಸುಧೀಂದ್ರ ರಾವ್ ಆದೇಶಿಸಿದ್ದಾರೆ.

ಸಮನ್ಸ್ ಜಾರಿಯಾದ ಮೇಲೆ ಕೋರ್ಟ್ ಗೆ ಬರಲು ಕಾಲಾವಕಾಶ ಕೋರಿದ್ದ ಕಟ್ಟಾ ಸುಬ್ರಮಣ್ಯ ನಾಯ್ಡು, ವಿಚಾರಣೆಗೆ ಗೈರು ಹಾಜರಾಗಿದ್ದರು. ಕಟ್ಟಾ ಅವರ ಪುತ್ರ ಪಾಲಿಕೆ ಸದಸ್ಯ ಜಗದೀಶ್, ಗ್ರಾಮ ಪಂಚಾಯ್ತಿ ಸದಸ್ಯ ಮಂಜು, ಟಿಪಿ ಮುನಿನಾರಾಯಣಪ್ಪ,ಗೋಪಿ, ಬಸವಪೂರ್ಣಯ್ಯ, ಶ್ರೀನಿವಾಸ್ ಅವರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ನೀಡುವಂತೆ ಕೋರಿದರು.

ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ನಾಲ್ಕು ಬಾರಿ ಸಮನ್ಸ್ ಜಾರಿಗೊಳಿಸಲಾಗಿತ್ತು, ಅವರ ಮನೆಗೆ ಸಮನ್ಸ್ ಪ್ರತಿ ಅಂಟಿಸಲಾಗಿತ್ತು. ಕಟ್ಟಾ ಅವರಂತೆ ಜಗಯ್ಯ ಹಾಗೂ ವೆಂಕಯ್ಯ ಎಂಬುವರು ಕೂಡಾ ಗೈರು ಹಾಜರಾಗಿದ್ದು, ಅವರಿಗೂ ಜು.23ರಂದು ಹಾಜರಾಗುವಂತೆ ಸೂಚಿಸಲಾಗಿದೆ.

ಏನಿದು ಹಗರಣ?: ಕಟ್ಟಾ ಸುಬ್ರಮಣ್ಯ ನಾಯ್ಡು ಒಡೆತನದ ಇಟಾಸ್ಕ ಕಂಪನಿಗೆ 87 ಕೋಟಿ ರು ಮೌಲ್ಯದ 325 ಎಕರೆ ಮಂಜೂರು ಮಾಡಿಸಿಕೊಳ್ಳಲಾಗಿದೆ. ಕೆಐಎಡಿಬಿ ನೀಡಿದ ಪರಿಹಾರ ಧನವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಹೊರೆಸಲಾಗಿದೆ. 9 ಜನರ ವಿರುದ್ಧ 18 ಸಾವಿರ ಪುಟಗಳ ಆರೋಪ ಪಟ್ಟಿ ತಯಾರಾಗಿದೆ.

English summary
KIADB land scam case: Loyukta court today issued a notice against ex minister Katta Subramanya Naidu that he should attend the court hearing on Jul 23. Else he can be arrested said Justice Sudhindra Rao. Katta Jagdish and other accused attended the court today(Jul 19).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X