ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಸ್ ಧೋನಿ ವಿಶ್ವಕಪ್ ಬ್ಯಾಟ್ ಭಾರಿ ಮೊತ್ತಕ್ಕೆ ಹರಾಜು

By Mahesh
|
Google Oneindia Kannada News

MS Dhoni's WC willow auctioned for Rs 72 Lakhs
ಲಂಡನ್ ಜು 19: ಭಾರತಕ್ಕೆ ವಿಶ್ವಕಪ್ 2011 ಗೆಲ್ಲಿಸಿಕೊಟ್ಟ ನಾಯಕ ಎಂಎಸ್ ಧೋನಿ ಅವರ ನೆಚ್ಚಿನ ಬ್ಯಾಟನ್ನು ಸೋಮವಾರ ರಾತ್ರಿ ಹರಾಜು ಹಾಕಲಾಯಿತು. ಅನಾಮಧೇಯ ವ್ಯಕ್ತಿಯೊಬ್ಬ 72 ಲಕ್ಷ ರೂ ಕೊಟ್ಟು ಧೋನಿ ಬ್ಯಾಟನ್ನು ಹೆಗಲಿಗೇರಿಸಿಕೊಂಡು ನಡೆದ ಎಂದು ತಿಳಿದು ಬಂದಿದೆ.

ಧೋನಿ ತಮ್ಮ ಪತ್ನಿ ನಡೆಸುವ ಸಾಕ್ಷಿ ಫೌಂಡೇಷನ್ ಎಂಬ ಸರ್ಕಾರೇತರ ಸಂಸ್ಥೆಗೆ ಹಣ ಸಂಗ್ರಹಿಸಲು ಬ್ಯಾಟನ್ನು ಹರಾಜಿಗಿಟ್ಟಿದ್ದರು. ಸಾಕ್ಷಿ ಫೌಂಡೇಷನ್ ಮೂಲಕ ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲಾಗುತ್ತದೆ. ಧೋನಿ ಲಕ್ಕಿ ಬ್ಯಾಟ್ ಗೆದ್ದವ ಆರ್ ಕೆ ಗ್ರೂಪ್ ನ ಸಿಬ್ಬಂದಿ ಎಂದು ತಿಳಿದು ಬಂದಿದೆ. ಹೆಚ್ಚಿನ ವಿವರಗಳು ತಿಳಿದಿಲ್ಲ.

ಶ್ರೀಲಂಕಾ ವಿರುದ್ಧದ ಅಂತಿಮ ಹಣಾಹಣಿಯಲ್ಲಿ 79 ಎಸೆತಗಳಲ್ಲಿ 91 ರನ್ ಸಿಡಿಸಿದ ಅಜೇಯರಾಗಿ ಉಳಿದ ಧೋನಿ, ತಮ್ಮ ನೆಚ್ಚಿನ ಬ್ಯಾಟ್ ಮೂಲಕ ಸಿಕ್ಸರ್ ಸಿಡಿಸಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು.

English summary
The prized willow of Indian captain M S Dhoni which secured the coveted World Cup 2011 trophy with an almighty swat over long on, was auctioned off for Rs 72 Lakh at a London hotel on Monday(Jul 18).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X