ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಗಳಲ್ಲಿ ಭಗವದ್ಗೀತೆ ಪಾಠ : ಬೇಕಾ ಬೇಡವಾ?

By Prasad
|
Google Oneindia Kannada News

Bhagavad Gita controversy
ಬೆಂಗಳೂರು, ಜು. 19 : ಕರ್ನಾಟಕದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಪಠಿಸಿದ 'ಭಗವದ್ಗೀತೆ' ಪಠ್ಯವಾಗಿ ಕಡ್ಡಾಯ ಮಾಡಬೇಕೆಂಬ ಬಿಜೆಪಿ ಸರಕಾರದ ವಿರುದ್ಧ ನಡೆಯುತ್ತಿರುವ ಆಂದೋಲನ ಧಾರ್ಮಿಕ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು, ದಿನೇದಿನೇ ವಿರಾಟ್ ರೂಪ ಪಡೆಯುತ್ತಿದೆ.

ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನಯವಾಗಿ ಕೇಳಿಕೊಂಡಿದ್ದರೆ ಅಥವಾ ಮನಮುಟ್ಟುವಂತೆ ಕೇಳಿಕೊಂದ್ದರೆ ಒಪ್ಪುತ್ತಿದ್ದರೇನೋ. ಆದರೆ, 'ಒಪ್ಪದಿದ್ದರೆ ದೇಶ ಬಿಟ್ಟು ತೊಲಗಿ' ಎಂಬ ಮಾತಿನಿಂದ ಭಗವದ್ಗೀತೆಯನ್ನು ಒಪ್ಪದ ಸಂಘಟನೆಗಳೆಲ್ಲವೂ ಸರಕಾರದ ವಿರುದ್ಧ ತಿರುಗಿಬಿದ್ದಿವೆ.

ಭಗವದ್ಗೀತೆ ಪಠ್ಯವಾಗಿ ತರಬೇಕೆಂದಿದ್ದರೆ ಮುಸ್ಲಿಂ ಪವಿತ್ರ ಗ್ರಂಥ ಕುರಾನ್ ಮತ್ತು ಕ್ರಿಶ್ಚಿಯನ್ನರ ಬೈಬಲ್ ಎರಡನ್ನೂ ಪಠ್ಯವಾಗಿ ತರುವ ಧೈರ್ಯ ಮಾಡಿ ಎಂದು ಕೆಲ ಸಂಘಟನೆಗಳು ಸರಕಾರಕ್ಕೆ ಸವಾಲು ಹಾಕಿವೆ. ಭಗವದ್ಗೀತೆ ಎಂಬುದು ಯಾವುದೇ ಮತಕ್ಕೆ ಅಥವಾ ಧರ್ಮಕ್ಕೆ ಸೇರಿದ್ದಲ್ಲ ಎಂದು ಸ್ಪಷ್ಟೀಕರಣ ನೀಡಲಾಗುತ್ತಿದೆಯಾದರೂ ಕೇಳಲು ರೊಚ್ಚಿಗೆದ್ದವರು ತಯಾರಿಲ್ಲ.

ಸದ್ಯಕ್ಕೆ ಈ ಸರಕಾರಿ ಸುತ್ತೋಲೆಯನ್ನು ಪ್ರಶ್ನಿಸಿ ಕರ್ನಾಟಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಗೆ ಏನೆನ್ನುತ್ತೀರಿ ಎಂದು ಕೋರಿ ಸರಕಾರಕ್ಕೆ ನೋಟೀಸ್ ಕೂಡ ಕಳಿಸಲಾಗಿದೆ. ಈ ಪ್ರಕರಣ ಕುರಿತಂತೆ ಒಂದೂ ಮಾತು ಆಡದ ಮುಖ್ಯಮಂತ್ರಿ ಯಡಿಯೂರಪ್ಪ ಮಾರಿಷಸ್ ಗೆ ಮಜಾ ಮಾಡಲು ಹೋಗಿದ್ದಾರೆ.

ಮುಂದೆ ಏನಾಗಲಿದೆ? ಏನಾಗಬೇಕು? ಭಗವದ್ಗೀತೆಯನ್ನು ಬಲವಂತವಾಗಿ ಕಲಿಸಬೇಕೆ ಬೇಡವೆ? ಇತ್ಯಾದಿ ಪ್ರಶ್ನೆಗಳು ಓದುಗರನ್ನು ಸೇರಿದಂತೆ ಕರ್ನಾಟಕದ ಸಮಸ್ತ ಜನರನ್ನೂ ಕಾಡುತ್ತಿವೆ. ಇದೆಲ್ಲದರ ಜೊತೆ, ಈ ಧರ್ಮ ಗ್ರಂಥಗಳ ಗೊಡವೆಗೆ ಹೋಗದೆ 'ಲೈಂಗಿಕ ಶಿಕ್ಷಣ'ವನ್ನೂ ಪಠ್ಯವಾಗಿ ಪರಿಚಯಿಸಿ ಎಂದು ಮೂಲಭೂತವಾದಿಗಳಲ್ಲದ ಮುಕ್ತವಾದಿಗಳು ಬೇಡುತ್ತಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು? ಕಾಮೆಂಟು ಜಾಗದಲ್ಲಿ ಬರೆಯಿರಿ.

English summary
Should Bhagavad Gita be introduced in primary and higher schools? A debate is going on in Karnataka. While BJP govt is for introduction, minorities and christian organizations are against it. They are demanding introduction of Quran and Bible too. Is it feasible?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X