• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಎಂಕೆ ಕಾರ್ಯಕಾರಿಣಿ ಬಿರುಗಾಳಿಯಲ್ಲಿ ಪತರಗುಟ್ಟುವ ಸಾಧ್ಯತೆ

By Srinath
|
ಚೆನ್ನೈ, ಜುಲೈ 18: ಈಗಾಗಲೇ ಹಗರಣಗಳಿಗೆ ಸಿಲುಕಿ ಪತರಗುಟ್ಟುತ್ತಿರುವ ಡಿಎಂಕೆ ಎಂಬ ಹಡಗಿಗೆ ಲಂಗರು ಹಾಕುವ ನಾವಿಕನಾರು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪಕ್ಷವು ಇದೇ ತಿಂಗಳು 23 ಹಾಗೂ 24 ರಂದು ಕೊಯಮತ್ತೂರಿನಲ್ಲಿ ಕಾರ್ಯಕಾರಿಣಿ ಸಭೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾರಿ ಬಿರುಗಾಳಿ ಎದ್ದೇಳುವ ನಿರೀಕ್ಷೆ ಇದೆ.

ಪಕ್ಷವು ಕರುಣಾನಿಧಿ ಉತ್ತರಾಧಿಕಾರಿ ಸಂಬಂಧ ಪುತ್ರರ ನಡುವಣ ಕಾಳಗದಿಂದ ಅಡಕತ್ತರಿಯಲ್ಲಿ ಸಿಲುಕಿದೆ. 2 ಜಿ ಹಗರಣ ಮತ್ತು ವಿಧಾನಸಭೆಯಲ್ಲಿ ಪಕ್ಷದ ಹೀನಾಯ ಸೋಲಿನಿಂದ ಪಕ್ಷ ಧೃತಿಗೆಟ್ಟಿದೆ. ಈಗಾಗಲೇ ಪುತ್ರ ಎಂಕೆ ಸ್ಟಾಲಿನ್ ಈ ಬಗ್ಗೆ ಸಾಕಷ್ಟು ರಾದ್ಧಾಂತ ಎಬ್ಬಿಸಿದ್ದಾನೆ. ಅತ್ತ ಅಳಗಿರಿ ಇತ್ತ ಕನಿಮೋಳಿಯಿಂದಾಗಿ ಕರುಣಾಗೆ ಧರ್ಮಸಂಕಟಗಳು ಹೆಚ್ಚಾಗಿವೆ.

ಇಂತಹ ಸಂಕಷ್ಟ ಸಮಯದಲ್ಲಿ ತಮ್ಮ ರಾಜಕೀಯ ಕಾರ್ಯದರ್ಶಿ, ಬಲಗೈ ಬಂಟ ಕೆ. ಷಣ್ಮುಗನಾಥನ್ ಅವರನ್ನು ಕರುಣಾನಿಧಿ ಹೆಚ್ಚಾಗಿ ಅವಲಂಬಿಸುತ್ತಾರೆ. ಆದರೆ ಅವರಿಗೂ ಹೇಳದೆ ಕೇಳದೆ ಕರುಣಾನಿಧಿ ಮಗನೊಂದಿಗೆ ಮುನಿಸಿಕೊಂಡು ಶಾಂತಿಯನ್ನರಸಿ ಮಹಾಬಲಿಪುರಂನಲ್ಲಿರುವ ರೆಸಾರ್ಟಿಗೆ ಏಕಾಂಗಿಯಾಗಿ ಪಾದ ಬೆಳೆಸಿದ್ದಾರೆ. ಕಳೆದ ವಾರ ಈ ಬೆಳವಣಿಗೆಗಳು ನಗರದಲ್ಲಿರುವ ಅಣ್ಣಾ ಅರಿವಾಲಯಂ ಪ್ರಧಾನ ಕಚೇರಿಯಲ್ಲಿ ನಡೆದಾದ ಬಳಿಕ, ಸ್ಟಾಲಿನ್ ಸಹ ಸಿಟ್ಟಿಗೆದ್ದು ಹೊರನಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With DMK family members divided in the aftermath of the 2G scam and the assembly poll drubbing, pressure is mounting on party chief Karunanidhi.Tensions erupted into a full-blown spat last weekend when the former CM left for a seaside resort following an argument with his younger son and potential successor M K Stalin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more