ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ಕೆಲಸ ಸಾಕಾಯ್ತು, ಸನ್ಯಾಸತ್ವ ಬೇಕಾಯ್ತು

By Bm Lavakumar
|
Google Oneindia Kannada News

Tahsildar Nagaraj turns Sanyasi
ಮೈಸೂರು, ಜುಲೈ 17: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಹೆಚ್.ಎಲ್. ನಾಗರಾಜ್‌ರವರು ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ಧೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ.

ತಹಶೀಲ್ದಾರ್ ನಾಗರಾಜ್‌ರವರ ಈ ದಿಢೀರ್ ನಿರ್ಧಾರಕ್ಕೆ ಸಾರ್ವಜನಿಕರು ದಿಗ್ಭ್ರಮೆಗೊಂಡಿದ್ದಾರೆ. ಈ ಹಿಂದೆ ನಾಗಮಂಗಲ, ಕೆ.ಆರ್.ಪೇಟೆಯಲ್ಲಿ ತಹಶೀಲ್ದಾರ್ ಆಗಿ ದಕ್ಷತೆಯಿಂದ ಕಾರ್ಯನಿರ್ವಹಿಸುವ ಮೂಲಕ ಜನಪ್ರಿಯ ಕೆಲಸಗಳನ್ನು ಮಾಡುವ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದರು.

ಇದೀಗ ಹದಿನೈದು ದಿನಗಳ ಕಾಲ ರಜೆ ಹಾಕಿರುವ ನಾಗರಾಜ್‌ರವರು ಗುರುಪೂರ್ಣಿಮೆಯಂದು ನಾಗಮಂಗಲದ ಬೆಳ್ಳೂರು ಆದಿಚುಂಚನಗಿರಿ ಶಾಖಾ ಮಠದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ಧೀಕ್ಷೆ ಪಡೆದಿದ್ದು, ತಮ್ಮ ಹುದ್ದೆಯನ್ನು ತ್ಯಜಿಸುವುದು ಖಚಿತವಾಗಿದೆ.

ಈ ಮಧ್ಯೆ ತಹಶೀಲ್ದಾರ್ ನಾಗರಾಜ್‌ರವರು ಸನ್ಯಾಸತ್ವ ಸ್ವೀಕರಿಸಿರುವುದು ಕೆಲವು ಪ್ರಗತಿಪರ ಸಂಘಟನೆಗಳ ಅಸಮಾಧಾನಕ್ಕೂ ಕಾರಣವಾಗಿದೆ. ಈಗಾಗಲೇ ಹಲವು ಸಂಘಟನೆಗಳು ಖಂಡನೆಯನ್ನು ವ್ಯಕ್ತಪಡಿಸಿವೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ತಹಶೀಲ್ದಾರ್ ಸಾಹೇಬರು ಎಲ್ಲವನ್ನೂ ತ್ಯಜಿಸಿ ಖಾವಿ ತೊಟ್ಟು ದೇವರನಾಮ ಸ್ತ್ಯುತಿಸುತ್ತಿದ್ದಾರೆ.

English summary
Tahsildar Nagaraj who served at had served in Holenarsipur in Hassan district, Nagamanagala and KR Pet, an upright officer now turned Sanyasi at a deeksha ceremony held during the Guru Poornima celebrations at Adichunchanagiri Mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X