ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ವರ್ಷವಾದರೂ ಹೂತಿದ್ದ ಬಾಬಾ ಶವ ಕೊಳೆತಿಲ್ಲ!

By * ಸಾಗರ ದೇಸಾಯಿ. ಯಾದಗಿರಿ,
|
Google Oneindia Kannada News

Yadgir Swamiji Miracle
ಯಾದಗಿರಿ ಜು 17: ಜಿಲ್ಲೆಯ ಅಂಬೇಡ್ಕರ್ ಚೌಕ್ ಸಮೀಪ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಸಿಕ್ಕ ಮೃತ ದೇಹ ಹಲವು ಕುತೂಹಲಕ್ಕೆ ಈಡಾಗಿದೆ. ದತ್ತಾತ್ರೇಯ ಮಠದಲ್ಲಿ ಸ್ವಾಮೀಜಿಯಾಗಿದ್ದ ಬಾಗಪ್ಪಾ ಅನ್ವರ ಅವರ ದೇಹವನ್ನು 7 ವರ್ಷದ ಹಿಂದೆ ಮಣ್ಣು ಮಾಡಲಾಗಿತ್ತು. ಆದರೆ, ನಿನ್ನೆ ಹೊರತೆಗೆದ ಸ್ವಾಮೀಜಿ ಶವ ಕೊಳೆತಿಲ್ಲ ಎಂಬುದು ಅಚ್ಚರಿ ಮೂಡಿಸಿದೆ.

ಶಿವ ಶರಣರ ಹಿಂದೂ ವಿಧಿ ವಿಧಾನದಂತೆ ಅಂಬೇಡ್ಕರ್ ಚೌಕ ಸಮೀಪದಲ್ಲಿಯೇ ಸ್ವಾಮೀಜಿಯ ಅಂತ್ಯ ಕ್ರಿಯೆ ಮಾಡಿದ್ದರು. ಸ್ವಾಮೀಜಿ ಪವಾಡ ಪರುಷರಾಗಿದ್ದು, ಮೃತ ದೇಹ 7 ವರ್ಷವಾದರೂ ಕೊಳೆತಿಲ್ಲವಾದ್ದರಿಂದ ಇದು ದೈವಿ ಪವಾಡವೆನ್ನುತ್ತಾರೆ ಮನೆಯವರು ಮತ್ತು ಸ್ಥಳೀಯರು.

ಪ್ರತಿಯೊಬ್ಬ ಭಕ್ತರ ಕೈಯಲ್ಲಿ ಭಜನೆ ಮಾಡುವ ತಾಳಗಳು. ಮಹಿಳೆಯರ ಕೈಯಲ್ಲಿ ಆರತಿ ಬೆಳಗುವ ದೀಪಗಳು. ದಾರಿಯುದ್ದಕ್ಕೂ ಮುಗಿಲು ಮುಟ್ಟುವ ನೂರಾರು ಭಕ್ತರ ಓ ನಮ: ಶಿವಾಯ ಜಯಘೋಷಗಳು ಮೊಳಗಿದ್ದವು. ಸ್ವಾಮೀಜಿಗಳ ಮೃತ ದೇಹವನ್ನು ಅನ್ವರ ಕುಟುಂಬದವರು ತಮ್ಮ ಮನೆಯ ಪಕ್ಕದಲ್ಲಿಯೇ ಸ್ವಾಮೀಜಿ ಹೆಂಡತಿ ಹೊನ್ನಮ್ಮಾ, ಮಗ ಡಾ.ಭಗವಂತ ಅನ್ವರ್ ಅಂತ್ಯ ಸಂಸ್ಕಾರ ಮಾಡಿದರು.

ಈ ಅಂತ್ಯ ಸಂಸ್ಕಾರ ನೋಡಲು ನೂರಾರು ಜನ ಆಗಮಿಸಿ ಸ್ವಾಮೀಜಿಯ ದರ್ಶನ ಪಡೆದರು. ಇದು ಒಂದು ರೀತಿಯ ದೈವಿ ಪವಾಡವಾಗಿದೆ. ಇನ್ನೊಂದು ರೀತಿಯಲ್ಲಿ ವೈಜ್ಞಾನಿಕ ಹಿನ್ನೆಲೆಯಿಂದ ನೋಡಿದರೆ ಶಿವಶರಣರ ಅಂತ್ಯಕ್ರೀಯೆ ಮಾಡುವಾಗ ಉಪ್ಪು ಜಾಸ್ತಿ ಹಾಕುವುದರಿಂದ ಈ ರೀತಿ ಶವ ಕೊಳೆಯುವುದಿಲ್ಲ ಎನ್ನುತ್ತಾರೆ ಹಿರಿಯ ನಾಗರಿಕರು.

ಅಂಬೇಡ್ಕರ್ ನಗರ ಸಭೆ ಸದಸ್ಯ ಶಂಕರ ಸಾಗರ ಇಲ್ಲಿ ಮಠವನ್ನು ಮಾಡಲಾಗುವುದು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಅಂತ್ಯ ಸಂಸ್ಕಾರವಾದ ಜಾಗದಲ್ಲಿ ಮಠವಾದರೆ ಅಲ್ಲಿಯೂ ಕೂಡ ಸ್ವಾಮೀಜಿಗಳು ಪವಾಡಗಳನ್ನು ಮಾಡುವರೇ ಎನ್ನುವುದು ಭಕ್ತರಲ್ಲಿ ಕುತೂಹಲ ಮೂಡಿಸಿದೆ.

English summary
Yadgir Baba Bagappa anwara's buried dead body found last night when road widening work was going on near Ambedkar Circle in Yadgir. Miracle thing is that even after seven year the Swamiji's dead body was not decomposed. According to Science human body will begin to decompose shortly after death
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X