ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೂವರೆ ಕೋಟಿ ರು. ಗೆದ್ದ ಮುಂಬೈ ಕುದುರೆ

By Shami
|
Google Oneindia Kannada News

Kingfisher Derby Bangalore
ಬೆಂಗಳೂರು, ಜು. 17 : ನುರಿತ ರೇಸ್ ಕರ್ಮಿ ಇಮ್ತಿಯಾಜ್ ಸೇಟ್ ಅವರಿಂದ ತರಬೇತಿಯಾದ ಮುಂಬೈನ 3 ವರ್ಷದ ಕುದುರೆ 'ಪ್ರೊಂಟೊ ಪ್ರೊಂಟೊ' ದಿ ಕಿಂಗ್ ಫಿಶರ್ ಬೆಂಗಳೂರು ಡರ್ಬಿಯನ್ನು ರೋಮಾಂಚಕಾರಿ ಸ್ಪರ್ಧೆಯಲ್ಲಿ ತನ್ನದಾಗಿಸಿಕೊಂಡಿತು.

ಭಾನುವಾರ ಬೆಂಗಳೂರು ರೇಸ್ ಕೋರ್ಸ್ ನಲ್ಲಿ ನಡೆದ ಒಟ್ಟು 9 ಓಟಗಳಲ್ಲಿ ಬೆಂಗಳೂರು ಡರ್ಬಿ ಪ್ರಧಾನ ಆಕರ್ಷಣೆಯಾಗಿತ್ತು. ಕುದುರೆಯನ್ನು ಗೆಲುವಿನ ಗೆರೆ ದಾಟಿಸಿದ ಜಾಕಿ ವೈ ಶ್ರೀನಾಥ್.

ದೇಶದ ನಾನಾ ಮೂಲೆಗಳಿಂದ ಆಗಮಿಸಿದ್ದ ರೇಸುಪ್ರಿಯರು, ರೇಸಿಂಗ್ ತಜ್ಞರು ಮತ್ತು ಪ್ರಧಾನ ಆಕರ್ಷಣೆಯ ಡರ್ಬಿ ರೇಸು ನೋಡಲೆಂದೇ ಬಂದಿದ್ದ ಸಾವಿರಾರು ಅಭಿಮಾನಿಗಳಿಂದ ಬೆಂಗಳೂರು ರೇಸ್ ಕ್ಲಬ್ ಆವರಣ ತುಂಬಿ ತುಳುಕುತ್ತಿತ್ತು.

ಡರ್ಬಿ ಗೆಲ್ಲುವುದರೊಂದಿಗೆ ಮಾಲಿಕ, ತರಬೇತುದಾರ, ಜಾಕಿ ಮತ್ತು ಕುದುರೆ ಲಾಯದ ಸಿಬ್ಬಂದಿಗಳು ಒಟ್ಟು ಎಲ್ಲ ಸೇರಿ 2.5 ಕೋಟಿ ರು. ಬಹುಮಾನ ಬಾಚಿಕೊಂಡರು. ಮಾಲಿಕರು ಪಲೋನ್ ಮಿಸ್ತ್ರಿ (ಮಂಜರಿ ಹಾರ್ಸ್ ಬ್ರೀಡಿಂಗ್ ಫಾರಮ್ ಪ್ರೈ.ಲಿ.) ಮತ್ತು ಡಿ.ಆರ್. ಥಾಕರ್ ಗೆಲುವಿನ ನಗೆ ಬೀರಿದರು. ಕಿಂಗ್ ಫಿಶರ್ ಕಂಪನಿಯ ಮಾಲಿಕ ವಿಜಯ್ ಮಲ್ಯ ಬಹುಮಾನ ವಿತರಿಸಿದರು.

ಬೆಟ್ಟಿಂಗ್ ರಿಂಗಿನಲ್ಲಿ 'ಲವ್ಲಿ ಕಿಸ್' ಮತ್ತು 'ಸ್ಟಾರ್ ಮಾರ್ಕೆಸ್' ಜಂಟಿ ಫೇವರಿಟ್ ಆಗಿದ್ದವು. ಆದರೆ, 2000 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಂದಿನಿಂದ ಜಿಗಿದು ಬಂದು ನಾಗಾಲೋಟ ಓಡಿದ 'ಪ್ರೊಂಟೊ ಪ್ರೊಂಟೊ' ಕೂದಲೆಳೆಯ ಅಂತರದಿಂದ ಡರ್ಬಿ ಗೆದ್ದುಕೊಂಡಿತು. ಫೇವರಿಟ್ಟುಗಳಿಗೆ ಬೆಲೆ 7-2, 7-2 ಇದ್ದರೆ ಪ್ರೊಂಟೊಗೆ 6-1 ಆಕರ್ಷಕ ಬೆಲೆ ಇತ್ತು.

English summary
'Pronto Pronto' trained by I. Sait bags The prestigious Kingfisher Derby-Bangalore ( Grade 1) for 3 year old only. Dr. Vijay Malya gave away huge purse of 2.5 crore rs and a trophy to the owners Mr Pallon S.r Mistry rep. Manjri Horse Breeds Farm P.Lt & Mr D. R. Thacker. Pro Y Srinath guided the colt to a thrilling win.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X