ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಜೆಸ್ಟಿಕ್‌ನಲ್ಲಿ ಎರಡು ಡಬಲ್ ಬ್ಯಾರಲ್ ಗನ್ ಪತ್ತೆ

By Rajendra
|
Google Oneindia Kannada News

Kempegowda bus station
ಬೆಂಗಳೂರು, ಜು.16: ಸದಾ ಜನನಿಬಿಡವಾಗಿರುವ ಮೆಜೆಸ್ಟಿಕ್ ಬಸ್‌ ನಿಲ್ದಾಣದಲ್ಲಿ ಶುಕ್ರವಾರ (ಜು.15) ಸಂಜೆ ಎರಡು ಡಬಲ್ ಬ್ಯಾರಲ್ ಗನ್‌ಗಳು ಪತ್ತೆಯಾಗಿವೆ. ಅನಾಥವಾಗಿ ಬಿದ್ದದ್ದ ಬ್ಯಾಗ್‌ನಲ್ಲಿ ಈ ಗನ್‌ಗಳನ್ನು ಇಡಲಾಗಿತ್ತು. ಮೊದಲೆ ಬಾಂಬ್ ಭೀತಿಯಿಂದ ಕಂಗಾಲಾಗಿರುವ ಜನ ಈ ಅನಾಥ ಬ್ಯಾಗಿ ಕಂಡು ಮತ್ತಷ್ಟು ಥರಗುಟ್ಟಿದ್ದಾರೆ. ಈ ಬಗ್ಗೆ ಪೊಲೀಸರ ಕಿವಿಗೂ ಸುದ್ದಿ ಮುಟ್ಟಿಸಿದ್ದಾರೆ.

ಕೂಡಲೆ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಬ್ಯಾಗನ್ನು ಪರಿಶೀಲಿಸಿ ವಶಕ್ಕೆ ತೆಗೆದುಕೊಂಡಾಗ ಈ ಗನ್‌ಗಳು ಪತ್ತೆಯಾಗಿವೆ. ಗನ್‌ಗಳ ಜೊತೆ 14 ಕಾಟ್ರಿಡ್ಜ್‌ಗಳು ಬ್ಯಾಗ್‌ನಲ್ಲಿದ್ದವು. ಉಪ್ಪಾರಪೇಟೆ ಪೊಲೀಸರು ತನಿಖೆ ನಡೆಸಲಾಗಿ ಈ ಗನ್‌ಗಳು ಬಿಹಾರದ ವ್ಯಕ್ತಿಗಳಿಗೆ ಸೇರಿದವು ಎಂದು ಗೊತ್ತಾಗಿದೆ.

ಒಂದು ಗನ್‌ನ ಲೈಸೆನ್ಸ್ ರಿನೀವಲ್ ಆಗಿಲ್ಲ ಹಾಗೂ ಇನ್ನೊಂದಕ್ಕೆ ಲೈಸೆನ್ಸ್ ಇತ್ತು. ಒಂದು ಗನ್ ಬಿಹಾರದ ಯೋಗೇಂದ್ರ ಸಿಂಗ್ ಎಂಬಾತನಿಗೆ ಸೇರಿದ್ದು ಎಂದು ಪೊಲೀಸರು ಪತ್ತ್ತೆ ಮಾಡಿದ್ದಾರೆ. ಇವರು ಈ ಗನ್‌ಗಳನ್ನು ಮೆಜೆಸ್ಟಿಕ್‌ನಲ್ಲಿ ಏಕೆ ಅನಾಥವಾಗಿ ಬಿಟ್ಟು ಹೋದರು, ಇದರ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಪೊಲೀಸರು ಇನ್ನಷ್ಟೆ ತನಿಖೆ ನಡೆಸಬೇಕಿದೆ. (ದಟ್ಸ್‌ಕನ್ನಡ ವಾರ್ತೆ)

English summary
Two double barrel guns found at Majestic bus stand (Kempegowda Bus Station), Bangalore on Friday (July 15) evening. Immediately Upparpet police arrived at the spot and examined the anonymous bag and taken their custody. The police are investigating further.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X