• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಕ್ತರ ದರ್ಶನಕ್ಕೆ ಪುಟ್ಟಪರ್ತಿ ಸಾಯಿಬಾಬಾ ಸಮಾಧಿ

By Rajendra
|

ಪುಟ್ಟಪರ್ತಿ, ಜು.16: ಇಲ್ಲಿನ ಪ್ರಶಾಂತಿ ನಿಲಯಂನಲ್ಲಿ ನಿರ್ಮಿಸಲಾಗಿರುವ ಸತ್ಯ ಸಾಯಿ ಬಾಬಾ ಅವರ ಮಹಾ ಸಮಾಧಿಯನ್ನು ಗುರುಪೂರ್ಣೆಯ ಶುಭ ಶುಕ್ರವಾರ ಭಕ್ತರ ದರ್ಶನಕ್ಕೆ ತೆರೆಯಲಾಗಿದೆ. ಪುಟ್ಟಪರ್ತಿಯಲ್ಲಿ ಈಗ ಮತ್ತೆ ಭಕ್ತ್ತರ ದಂಡು ಹರಿದುಬರುತ್ತಿದ್ದು ಹಬ್ಬದ ಸಂಭ್ರಮ ನೆಲೆಗೊಂಡಿದೆ.

ಪ್ರಶಾಂತಿ ನಿಲಯಂನ ಸಾಯಿ ಕುಲ್ವಂತ್ ಸಭಾಂಗಣದಲ್ಲಿ ಸಹಸ್ರಾರು ಭಕ್ತರು ಸೇರಿದ್ದು, ಬಾಬಾ ಅವರ ಮಹಾ ಸಮಾಧಿಯ ದರ್ಶನ ಪಡೆದರು. ಸಾಯಿ ಬಾಬಾ ಅವರು ಇದೇ ಸಭಾಂಗಣದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದರು. ಆಯಾತಕಾರದಲ್ಲಿ ನಿರ್ಮಿಸಿರುವ ಮಹಾಸಮಾಧಿ ಶುಭ್ರವಾದ ಬಿಳಿ ಬಣ್ಣದ ಅಮೃತ ಶಿಲೆಯಿಂದ ಕೂಡಿದೆ.

ಏಪ್ರಿಲ್ 24ರಂದು ಅಸ್ತಂಗತರಾದ ಸಾಯಿ ಬಾಬಾ ಅವರನ್ನು ಏ.27ರಂದು ಸಂಸ್ಕಾರ ಮಾಡಲಾಗಿತ್ತು. ಸಾಯಿ ಬಾಬಾ ಅವರ ಸಮಾಧಿ ದರ್ಶನಕ್ಕಾಗಿ ಭಕ್ತರು ಕಾತುರದಿಂದ ನಿರೀಕ್ಷಿಸುತ್ತಿದ್ದರು. ಶುಕ್ರವಾರ ಮಹಾಸಮಾಧಿಯನ್ನು ಕಣ್ತುಂಬಿಕೊಂಡ ಭಕ್ತರು ಪುಳಕಗೊಂಡರು. (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thousands of devotees thronged the famous Saibaba Temple here to offer pooja' on the occasion of Guru Poornima' today. Saibaba Sansthan, which manages one of the richest temples in the country, has made elaborate security arrangement around the holy place in wake of the July 13 Mumbai serial bomb blasts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more