• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಬೈ ಸ್ಫೋಟ : ದಿನೇದಿನೇ ದುರ್ಬಲವಾಗುತ್ತಿರುವ ಭಾರತ?

By * ಬಿಜಿ ಮಹೇಶ್
|

ಮುಂಬೈ ನಗರಿಯನ್ನು ಪೊಲೀಸರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದರೂ ಗುಪ್ತದಳಕ್ಕೆ ಸುಳಿವು ಕೂಡ ಸಿಗದಂತೆ ಈ ವಾಣಿಜ್ಯ ನಗರಿಯ ಮೇಲೆ ಮೇಲಿಂದ ಮೇಲೆ ಭಯೋತ್ಪಾದಕ ದಾಳಿಗಳಾಗುತ್ತಿರುವುದು ಏತಕ್ಕೆ?

ಮುಂಬೈ ಮೇಲೆ ಇದು ಆಗುತ್ತಿರುವುದು ಇದು ನಾಲ್ಕನೇ ಪ್ರಮುಖ ದಾಳಿ. ಮೊದಲ ಬಾರಿ ಆಗಿದ್ದು 1993, ಮಾರ್ಚ್ 12ರಂದು. ದಾವೂದ್ ಇಬ್ರಾಹಿಂ ಸರಣಿ ಹತ್ಯೆ ನಡೆಸಿದ್ದ. ಎರಡನೇ ಬಾರಿ ನಡೆದದ್ದು 2006ರ ಜುಲೈ 11ರಂದು. ರೈಲುಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ 7 ಜನ ಹತ್ಯೆಗೀಡಾಗಿದ್ದರು. ಮೂರನೇ ಬಾರಿ ಆದದ್ದು ನವೆಂಬರ್ 26, 2008ರಲ್ಲಿ ಇದರಲ್ಲಿ 166 ಜನ ಹತರಾಗಿದ್ದರು.

ಈಗ ನಾಲ್ಕನೇ ಬಾರಿ ದಾಳಿ ನಡೆದಿದೆ. ಜುಲೈ 13ರಂದು ನಡೆದ ಮೂರು ಸರಣಿ ಸ್ಫೋಟಗಳು 19 ಜನ ಬಲಿ ತೆಗೆದುಕೊಂಡಿವೆ. 131 ಜನ ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ಯಾರ ಕೈವಾಡ ಇದೆಯೆಂದು ಇನ್ನೂ ತಿಳಿದುಬಂದಿಲ್ಲ. ಇಂಡಿಯನ್ ಮುಜಾಹಿದ್ದಿನ್ ಕೈವಾಡವಿರಬಹುದೆಂದು ಶಂಕಿಸಲಾಗಿದೆಯಾದರೂ ದೃಢಪಟ್ಟಿಲ್ಲ.

ಯಾಕೆ ಹೀಗೆ? ಮುಂಬೈ ಮಾತ್ರವಲ್ಲ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಉಗ್ರರು ದಾಳಿ ಮಾಡುತ್ತಲೇ ಇದ್ದಾರೆ. ದಾಳಿಯಾದಾಗ ಕಟ್ಟೆಚ್ಚರ ವಹಿಸುವುದು, ಬಿಸಿ ಆರುತ್ತಿದ್ದಂತೆ ಮತ್ತೆ ಎಂದಿನ ನಿರ್ಲಕ್ಷ್ಯ ಸ್ಥಿತಿಗೆ ಜಾರುತ್ತಿದ್ದೇವೆ. ಇದೇ ಸಮಯ ನೋಡಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಪಿ. ಚಿದಂಬರಂ ತಮ್ಮ ಕೈಲಾದದ್ದನ್ನು ಮಾಡಿತ್ತಿದ್ದಾರಾದರೂ, ಅವರು ಬಿಟ್ಟರೆ ಇನ್ನಾರು? ಎಂಬಂತಹ ಸ್ಥಿತಿ ನಮ್ಮಲ್ಲಿದೆ.

ಇದಕ್ಕೆ ಕಾರಣರು ಯಾರು? ಬಲಿಷ್ಠ ಭಾರತ ಭಯೋತ್ಪಾದನೆ ಹತ್ತಿಕ್ಕುವಲ್ಲಿ ದಿನೇ ದಿನೇ ನಿಶ್ಶಕ್ತವಾಗುತ್ತಿದೆಯೆ? ಅಥವಾ ನಮ್ಮ ರಾಜಕಾರಣಿಗಳೇ ದೇಶವನ್ನು ಈ ಸ್ಥಿತಿಗೆ ತಂದಿದ್ದಾರಾ? ಉಗ್ರರನ್ನು ಮಟ್ಟ ಹಾಕುವುದಿರಲಿ, ಸಿಕ್ಕವರನ್ನು ಗಲ್ಲಿಗೇರಿಸಲೂ ನಮ್ಮಿಂದ ಆಗುತ್ತಿಲ್ಲ. ಮತ್ತೆ ಯಾವ್ಯಾವ ಸಂದರ್ಭದಲ್ಲಿ ದಾಳಿಗಳು ನಮ್ಮ ಮೇಲೆ ಆಗಿವೆ ಎಂಬ ವಿವರಗಳನ್ನು ಈ ಲೇಖನದಲ್ಲಿ ಓದಿರಿ.

English summary
Terrorist attack on Mumbai on July 13 is the fourth major attack on business hub of India. Mumbai has become the soft target for terrorists. Why is that? Is India becoming weaker day-by-day or our politicians have made India weak? Point blank by B G Mahesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more