ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನ ದರ್ಶನಭ್ಯಾಗ ಪಡೆದ ಇಸ್ರೋ ಅಧ್ಯಕ್ಷ

By Rajendra
|
Google Oneindia Kannada News

K Radha Krishnan
ತಿರುಮಲ, ಜು.16: ಭಾರತೀಯ ಬಾಹ್ಯಾಕಾಶ ಸಂಶೋಧನಾ ಇಲಾಖೆಯ ಅಧ್ಯಕ್ಷ ರಾಧಾಕೃಷ್ಣನ್ ಅವರು ಶನಿವಾರ ತಿರುಮಲ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದರು. ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪಿಎಸ್‌ಎಲ್‌ವಿ ಸಿ-17 ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಧಾಕೃಷ್ಣನ್ ತಿರುಪತಿಗೆ ಭೇಟಿ ನೀಡಿದ್ದಾರೆ. ಅವರು ಕುಟುಂಬ ಸಮೇತ ಇಂದು ತಿರುಪತಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಇಂದು ಬೆಳಗ್ಗೆ ವಿಐಪಿ ವಿರಾಮದ ಸಮಯದಲ್ಲಿ ಅವರು ತಿಮ್ಮಪ್ಪನ ದರ್ಶನ ಪಡೆದರು.

ಜಿಸ್ಯಾಟ್ 12 ಉಪಗ್ರಹವನ್ನು ಇಸ್ರೋ ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಯಶಸ್ವಿ ಮೈಲುಗಲ್ಲನ್ನು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ರಾಧಾಕೃಷ್ಣನ್ ಅವರು ಇಂದು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿರುವುದು ವಿಶೇಷ. (ಏಜೆನ್ಸೀಸ್)

English summary
Chairman of Indian Space Research Organisation ( ISRO ) K Radhakrishnan on Saturday visited the abode of Lord Venkateswara in Tirumala hills and performed special puja for the successful launch of PSLV-C-17 from Sriharikota in Nellore district at 4 .48 pm on July 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X