ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಸ್ಫೋಟ : 25 ಕೋಟಿ ರು. ವಜ್ರ ಚೆಲ್ಲಾಪಿಲ್ಲಿ

By Prasad
|
Google Oneindia Kannada News

Mumbai blast 2011 : Diamonds fly in air
ಮುಂಬೈ, ಜು. 15 : ಬುಧವಾರ ಸಂಜೆ ಓಪೆರಾ ಹೌಸ್ ನ ಖಾವ್ ಗಲ್ಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟಗೊಂಡಾಗ ಚೆಲ್ಲಾಪಿಲ್ಲಿಯಾದ ಮಾನವರ ಅಂಗಾಗಗಳು, ಚಪ್ಪಲಿ, ಬಟ್ಟೆಬರೆಗಳ ಜೊತೆ 25 ಕೋಟಿ ರು.ಗೂ ಹೆಚ್ಚು ಬೆಲೆಬಾಳುವ ವಜ್ರಗಳು ಮಣ್ಣುಪಾಲಾಗಿವೆ.

ಸೊಂಟಕ್ಕೆ ಸಿಕ್ಕಿಸಿರುವ ಸಿಕ್ರೆಟ್ ಪಾಕೆಟ್ ನಲ್ಲಿ ವಜ್ರಗಳನ್ನು ತುಂಬಿಕೊಂಡು, ಮುಷ್ಠಿಯಲ್ಲಿ ವಜ್ರ ಬಿಗಿದುಕೊಂಡು ರಸ್ತೆ ಬದಿಯ ಅಂಗಡಿಯಲ್ಲಿ ಬಿಸಿಬಿಸಿ ಚಾಯ್ ಕುಡಿದು ಮನೆ ಸೇರುವ ಹೊತ್ತಿನಲ್ಲಿ ಬಾಂಬ್ ಸಿಡಿಡಿದೆ. ಛಿದ್ರಛಿದ್ರವಾಗಿರುವ ಸೊಂಟದ ಜೊತೆ ಸಿಕ್ಕಿಸಿಕೊಂಡಿದ್ದ ಅಮೂಲ್ಯ ವಜ್ರಗಳು ಗಾಳಿಯಲ್ಲಿ ತೂರಾಡಿವೆ.

ಈ ವಿಷಯವನ್ನು ಅಲ್ಲಿನ ವಜ್ರದ ವ್ಯಾಪಾರಿಗಳು ನಿಧಾನವಾಗಿ ಬಾಯಿಬಿಡುತ್ತಿದ್ದಾರೆ. ಮೊದಲೇ ಹೇಳಿದರೆ ಭದ್ರತಾ ಸಿಬ್ಬಂದಿಗಳು ಭದ್ರತೆ ಒದಗಿಸುವ ಬದಲು ವಜ್ರದ ಹುಡುಕಾಟದಲ್ಲಿ ತೊಡಗಿಯಾರೆಂದು ಬಾಯಿ ಮುಚ್ಚಿಕೊಂಡಿದ್ದರು.

ಆದರೆ, ವಜ್ರಗಳನ್ನು ಕಳೆದುಕೊಂಡಿದ್ದಕ್ಕಿಂತ ಉಗ್ರರ ಅಟ್ಟಹಾಸಕ್ಕೆ ಮಾನವರು ಬಲಿಯಾಗುತ್ತಿರುವುದು ವ್ಯಾಪಾರಿಗಳಿಗೆ ಹೆಚ್ಚಿನ ನೋವು ತಂದಿದೆ. ಮಾನವ ಜೀವಕ್ಕೆ ಬೆಲೆ ಮತ್ತು ಭದ್ರತೆಯೇ ಇಲ್ಲದಂತಾಗಿದೆ ಎಂದು ಆಕ್ರಂದಿಸುತ್ತಿದ್ದಾರೆ.

ಉಗ್ರರ ದೃಷ್ಟಿಯಲ್ಲಿ ಜೇಬಲ್ಲಿ ಚಿಲ್ಲರೆಯೂ ಇಲ್ಲದೆ ಪಾವ್ ಬಾಜಿ ತಿನ್ನಲು ತಡಕಾಡುವ ಭಿಕಾರಿಯೂ ಒಂದೆ, ಕಿಸೆಯಲ್ಲಿ ವಜ್ರಗಳನ್ನು ತುಂಬಿಕೊಂಡು ಅದೇ ಪಾವ್ ಬಾಜಿ ತಿನ್ನಲು ಬರುವ ಶ್ರೀಮಂತನೂ ಒಂದೇ.

English summary
When the bomb blast took place at Opera house in Mumbai, diamonds worth Rs. 25 crores flew in the air along with body parts of the innocent people. Merchants carry diamonds in their secret pocket stuck to their waist while returning home after duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X