ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝವೇರಿ ಬಜಾರಿನಲ್ಲಿ ಕೊಡೆ ಇಟ್ಟವರು ಯಾರು?

By Srinath
|
Google Oneindia Kannada News

Zaveri Bazaar blasts umbrella bomb used
ಮುಂಬೈ, ಜುಲೈ 14: ಝವೇರಿ ಬಜಾರ್ ಎಂಬುದು ಬೆಂಗಳೂರಿನ ಅವೆನ್ಯೂ ರಸ್ತೆಯಂತೆ ಇದೆ. ಹೆಸರೇ ಹೇಳುವಂತೆ ಇದು ಚಿನ್ನದ ವ್ಯಾಪಾರಕ್ಕೆ ಪ್ರಸಿದ್ಧ. ಇಲ್ಲಿನ ಖಾಹು ಗಲ್ಲಿಯಲ್ಲಿಯೇ ಬಾಂಬ್‌ ಸ್ಫೋಟಿಸಿರುವುದು. ಈ ಹಿಂದೆ ಝವೇರಿ ಬಜಾರಿನಲ್ಲಿ 2003ರ ಆಗಸ್ಟ್ 25ರಂದು ಪ್ರಬಲ ಬಾಂಬ್‌ ಸ್ಫೋಟಿಸಿ ಹಲವರು ಪ್ರಾಣತೆತ್ತಿದ್ದಾರೆ. ಹಾಗೆ ನೋಡಿದರೆ ಬಜಾರಿನ ಮೇಲೆ ಉಗ್ರರು ಆಗಾಗ ಕಣ್ಣುಹಾಕುತ್ತಿದ್ದಾರೆ.

ದಾಖಲಾರ್ಹ ಅಂಶವೆಂದರೆ ಝವೇರಿ ಬಜಾರಿನಲ್ಲಿ ಸುಧಾರಿತ ಬಾಂಬನ್ನು ''ಕೊಡೆ''ಯಲ್ಲಿ ಇಡಲಾಗಿತ್ತು. ಮುಂನೈ ಪೊಲೀಸ್ ಆಯುಕ್ತ ಅರುಪ್ ಪಟ್ನಾಯಿಕ್ ಅವರೇ ತಿಳಿಸಿರುವಂತೆ ಛತ್ರಿಯೊಂದರಲ್ಲಿ ಸುಧಾರಿತ ಟೈಮರ್ ಬಾಂಬ್ ಇಡಲಾಗಿತ್ತು. 2003ರಲ್ಲಿ ಪ್ರೆಷರ್ ಕುಕ್ಕರ್ ನಲ್ಲಿ ಬಾಂಬ್ ಇಡಲಾಗಿತ್ತು ಎಂಬುದು ಗಮನಾರ್ಹ. ಆದರೆ ಈ ಬಾರಿ ಕೊಡೆ ಬಳಸಲಾಗಿತ್ತು. ಯಾಕಪಾ ಅಂದರೆ ಬುಧವಾರ ಸಂಜೆ ದಕ್ಷಿಣ ಮುಂಬೈನ ಈ ಭಾಗದಲ್ಲಿ ಮಳೆಯಾಗುತ್ತಿತ್ತು. ಆದ್ದರಿಂದ ಯಾರಿಗೂ ಅನುಮಾನ ಬಾರದಿರಲಿ ಎಂದು ಕೊಡೆಯೊಳಗೆ ಬಾಂಬಿಡಲಾಗಿತ್ತು.

English summary
Terrorists had reportedly used an umbrella to camouflage a high intensity improvised explosive device (IED) at Zaveri Bazaar in south Mumbai, as it would not have raised any suspicion in the ongoing monsoon season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X