ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಸತತ ದಾಳಿ: ಮುಂಬೈ ಮೇಲೆಯೇ ಏಕೆ!?

By Srinath
|
Google Oneindia Kannada News

Mumbai local trains
ಮುಂಬೈ, ಜುಲೈ 14: ಮತ್ತೆ ಮತ್ತೆ ಮುಂಬೈ ಮೇಲೆ ಭಯೋತ್ಪಾದಕ ದಾಳಿಗಳಾಗಲು ಅದರ ಭೂಗೋಳವೇ ಮುಳುವಾಗುತ್ತಿದೆಯೇ !? ಹೀಗೊಂದು ಪ್ರಶ್ನೆ ಎದ್ದಿದೆ. ಕಳೆದ ಎರಡು ದಶಕಗಳಲ್ಲಿ 5 ಬಾರಿ ಈ ವಾಣಿಜ್ಯ ರಾಜಧಾನಿ ಮೇಲೆ ಭಯೋತ್ಪಾದಕ ದಾಳಿಗಳಾಗಿವೆ. 1993ರಿಂದೀಚೆಗೆ ಆಗಾಗ್ಗೆ ದಾಳಿಗಳಾಗುತ್ತಲೇ ಇವೆ. ಬಾಬರಿ ಮಸೀದಿ ಕೆಳಗುರುಳಿದ್ದರ ಹಿನ್ನೆಲೆಯಲ್ಲಿ 93ರ ಸರಣಿ ಸ್ಫೋಟಗಳು ನಡೆದಿದ್ದವು.

ಆನಂತರವೂ ಏಕೆ, why? ಮಹಾನಗರಿಯ ಲೇ ಔಟೇ ಹಾಗಿದೆಯಾ? ಜನಜಂಗುಳಿಯೂ ಕಾರಣವಾ!?

ಮುಂಬಯಿಯಂತಹ ಮಹಾನಗರಿ ಇಡೀ ವಿಶ್ವದ ಗಮನವನ್ನು ಕ್ಷಣಾರ್ಧದಲ್ಲಿ ತನ್ನತ್ತ ಸೆಳೆಯುತ್ತದೆ. ಭಯೋತ್ಪಾದಕರಿಗೆ ಬೇಕಾಗಿರುವುದೂ ಅದೇಯೆ. ಮತ್ತೊಂದು ಪೂರಕ ಅಂಶವೆಂದರೆ ಜನ, ಜನ. ಎಲ್ಲೆಲ್ಲೂ ಜನವೇ! ಹೆಚ್ಚು ಅನಾಹುತ ಉಂಟುಮಾಡಲು ಇಂತಹ ತಾಣಗಳು ಪ್ರಶಸ್ತವಾಗಿರುತ್ತವೆ. ಉಗ್ರರ ಇರಾದೆಯೂ ಇದೇ.

ಹಾಗಾದರೆ ಏನು ಮಾಡಬೇಕು? ಪೊಲೀಸರು ಇಂತಹ ಕೃತ್ಯಗಳನ್ನು ತಡೆಗಟ್ಟಬಹುದಲ್ಲಾ? ಅದರಲ್ಲೇ ಉತ್ತರವೂ ಇದೆ. ಎಷ್ಟೂ ಅಂತ ಪೊಲೀಸರು ಕಣ್ಗಾವಲಿಡಲು ಸಾಧ್ಯ. ಅದರಲ್ಲೂ ಹೊರ ಪ್ರದೇಶಗಳಿಂದ ಬಂದು-ಹೋಗುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಇವರ ಸಮ್ಮುಖದಲ್ಲಿ ಕಾರ್ಯನಿರ್ವಹಿಸುವುದು ಪೊಲೀಸರಿಗೆ ಕಷ್ಟ ಕಷ್ಟ. ಹಾಗೆಂದೇ ಉಗ್ರರು ಪೊಲೀಸರನ್ನು ಸುಲಭವಾಗಿ ಯಾಮಾರಿಸಿ ತಮ್ಮ ಗುರಿ ಸಾಧಿಸುತ್ತಾರೆ. ಮುಂದೆಯೂ.... ಎಚ್ಚರ.

English summary
Five terror attacks in less than two decades. Since March 1993, Mumbai has periodically witnessed repeated attacks. Why is the city being targeted again and again? Has it something to do with the layout of the city and its population density? Whatever, the financial hub of India has shown amazing tenacity to withstand N number of onslaughts over the decades. What makes this city so special?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X