ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರಿಗೆ ದೇಶದ ಏಕೈಕ ಪೊಲೀಸ್‌ ಕಮಾಂಡೊ ಪಡೆಯ ಅಭಯ

By Srinath
|
Google Oneindia Kannada News

Karnataka police commandos
ಬೆಂಗಳೂರು, ಜುಲೈ 14: ಮುಂಬೈ ನಗರದಲ್ಲಿ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ರಾಜ್ಯದ ವಿಶೇಷ ಭಯೋತ್ಪಾದಕ ನಿಗ್ರಹ ದಳವನ್ನು ಸನ್ನದ್ದಿನಲ್ಲಿಡಲಾಗಿದೆ. ಭಯೋತ್ಪಾದಕರ ದಾಳಿಯನ್ನು ಹತ್ತಿಕ್ಕುವಲ್ಲಿ ಪ್ರತ್ಯೇಕ ತರಬೇತಿ ಹೊಂದಿರುವ ದೇಶದ ಏಕೈಕ ಪೊಲೀಸ್‌ ಇಲಾಖೆಯ ಕಮಾಂಡೊ ಪಡೆ ಇದಾಗಿದ್ದು, ಕನ್ನಡಿಗರು ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ ಎಂದು ಬುಧವಾರ ಮಧ್ಯ ರಾತ್ರಿ ಬೆಂಗಳೂರಿನಲ್ಲಿ ಸುರಕ್ಷಾ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿದ ಗೃಹ ಸಚಿವ ಆರ್. ಅಶೋಕ್ ಅಭಯ ನೀಡಿದ್ದಾರೆ.

ಬೆಂಗಳೂರಿನಲ್ಲಿ ಜನ ಸಂದಣಿ ಹೆಚ್ಚಾಗಿರುವ ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ಸಿಟಿ-ಯಶವಂತಪುರ, ಕಂಟೋನ್ಮೆಂಟ್‌ ರೈಲು ನಿಲ್ದಾಣಗಳು, ಎಲ್ಲ ಶಾಪಿಂಗ್‌ ಮಾಲ್‌ ಹಾಗೂ ಮಾರ್ಕೆಟ್‌ ಪ್ರದೇಶಗಳಲ್ಲಿ ಬಿಗಿ ಭದ್ರತೆ ವಹಿಸುವಂತೆ ನಗರ ಪೊಲೀಸ್‌ ಆಯುಕ್ತ ಜ್ಯೋತಿ ಪ್ರಕಾಶ್‌ ಮಿರ್ಜಿ ಎಲ್ಲ ಡಿಸಿಪಿಗಳಿಗೆ ಸೂಚಿಸಿದ್ದಾರೆ. ಅದರಲ್ಲಿಯೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ಆದೇಶಿಸಿದ್ದಾರೆ.

ಬುಧವಾರ ರಾತ್ರಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಇದರ ಜತೆಗೆ ಭಯೋತ್ಪಾದನೆ ದಾಳಿಯಂಥ ಕೃತ್ಯಗಳು ನಡೆದಾಗ ಕಾರ್ಯಾಚರಣೆ ನಡೆಸುವಲ್ಲಿ ಎನ್‌ಎಸ್‌ಜಿ ಮಾದರಿ ತರಬೇತಿ ಪಡೆದಿರುವ ನೂತನ ಕರ್ನಾಟಕ ಕಮಾಂಡೊ ಪಡೆಯನ್ನೂ ಸನ್ನದ್ಧಲ್ಲಿರಿಸಲಾಗಿದೆ.

ಸುಮಾರು 300 ಮಂದಿ ಕಮಾಂಡೊಗಳಿರುವ ಈ ಪಡೆಗೆ ಯಾವುದೇ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸುವುದಕ್ಕೆ ಸಿದ್ಧವಾಗಿರುವಂತೆ ರಾಜ್ಯ ಪೊಲೀಸ್‌ ಇಲಾಖೆ ಸೂಚನೆ ಕೊಟ್ಟಿದೆ. ಮುಂಬೈನಂತೆ ಬೆಂಗಳೂರು ನಗರ ಕೂಡ ಭಯೋತ್ಪಾದಕರ ಟಾರ್ಗೆಟ್‌ ನಗರವಾಗಿದೆ. ಈಗಾಗಲೇ ನಗರದಲ್ಲಿ ಕೆಲವು ಬಾಂಬ್‌ ಸ್ಫೋಟ ಪ್ರಕರಣಗಳು ಆಗಿವೆ. ಈ ಎಲ್ಲ ಕಾರಣಕ್ಕೆ ವಿಶೇಷ ಭಯೋತ್ಪಾದಕ ನಿಗ್ರಹ ಕಮಾಂಡೊ ಪಡೆಯನ್ನು ರೆಡಿ ಮಾಡಲಾಗಿದೆ.

English summary
The Home Minister R Ashok has assured kannadigas that the first batch of commandos trained under the Centre for Counter Terrorism (CCT) of the Internal Security Division (ISD) is now ready to take on terrorists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X