ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ಪು ತಿಂದವರು ನೀರು ಕುಡಿಯಲೇ ಬೇಕು: ಸಾನಿಯಾ

By Srinath
|
Google Oneindia Kannada News

sania mirja
ಇಂದೋರ್, ಜುಲೈ 14: ಮೈದಾನದಲ್ಲಿ ಬೆವರು ಸುರಿಸುವುದರ ಹಿಂದೆ ಎಷ್ಟೆಲ್ಲ ಕಠಿಣ ಪರಿಶ್ರಮವಿದೆ ಎಂಬುದು ಟೆನಿಸ್‌ ದೇವತೆ ಸಾನಿಯಾ ಮಿರ್ಜಾಗೆ ಚೆನ್ನಾಗಿ ಗೊತ್ತು. ಅಂತಹ ಪರಿಶ್ರಮಕ್ಕೆ ಕಳಂಕ ತರುವಂತಹ ಪ್ರಯತ್ನ ನಡೆದಾಗ ಸಹಜವಾಗಿಯೇ ಅದಕ್ಕೆ ಛೀಮಾರಿ ಹಾಕಿದ್ದಾರೆ.

ಭಾರತದ 7 ಅಗ್ರಮಾನ್ಯ ಆಥ್ಲೀಟ್‌ಗಳು ಉದ್ದೀಪನ ಪರೀಕ್ಷೆಯಲ್ಲಿ ವಿಫ‌ಲರಾಗಿರುವ ಬಗ್ಗೆ ಸಾನಿಯಾ ಭಾರೀ ನಿರಾಶೆ ವ್ಯಕ್ತಪಡಿಸಿದ್ದಾರೆ. ಅವರೆಲ್ಲರೂ ತಪ್ಪಿತಸ್ಥರೆಂದು ಸಾಬೀತಾದಲ್ಲಿ ಉಗ್ರ ಶಿಕ್ಷೆ ವಿಧಿಸಬೇಕು ಎಂದೂ ಅವರು ಪ್ರತಿಪಾದಿಸಿದ್ದಾರೆ.

ಸ್ವತಃ ನಾನೂ ಓರ್ವ ಕ್ರೀಡಾಪಟುವಾಗಿ, ಈ ಆಥ್ಲೀಟ್‌ಗಳ ತಪ್ಪು ನಿರೂಪಿತವಾಗುವವರೆಗೂ ತಪ್ಪಿತಸ್ಥರಂತೆ ಕಾಣಬಾರದು ಎನ್ನುವುದು ನನ್ನ ಅನಿಸಿಕೆ. ಒಂದು ವೇಳೆ ಅವರ ತಪ್ಪು ಸಾಬೀತಾದಲ್ಲಿ ಶಿಕ್ಷೆ ನೀಡಲೇಬೇಕು ಎಂದರು ಸಾನಿಯಾ.

ಮುಂದೆ ಯಾರು? : ಭಾರತದಲ್ಲಿ ತಮ್ಮ ಸ್ಥಾನವನ್ನು ತುಂಬುವಂಥ ಹಾಗೂ ತಮ್ಮ ನಿವೃತ್ತಿಯ ಬಳಿಕ ಗ್ರ್ಯಾನ್‌ ಸ್ಲಾಂ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸುವಂಥ ಯಾವುದೇ ಉದಯೋನ್ಮುಖ ಟೆನಿಸ್‌ ಆಟಗಾರ್ತಿ ಹೊರಹೊಮ್ಮುತ್ತಿಲ್ಲ ಎಂದು ಸಾನಿಯಾ ಇದೇ ವೇಳೆ ನಿರಾಸೆ ವ್ಯಕ್ತಪಡಿಸಿದರು.

ದೇಶದಲ್ಲಿ ಮಹಿಳಾ ಟೆನಿಸ್‌ಗೆ ದೊಡ್ಡ ಭವಿಷ್ಯ ನನಗೀಗ ತೋರುತ್ತಿಲ್ಲ. ನನ್ನ ಬಳಿಕ ಯಾವುದೇ ಹುಡುಗಿ ದೊಡ್ಡ ಟೂರ್ನಿಗಳಲ್ಲಿ ಸ್ಪರ್ಧಿಸುವಂತೆ ತೋರುತ್ತಿಲ್ಲ ಎಂದು ಸಾನಿಯಾ ವ್ಯಥೆಪಟ್ಟರು.

English summary
Indian tennis ace Sania Mirza has expressed disappointment over seven top women track and field athletes flunking dope tests but said that they should be handed stringent punishment if found guilty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X