ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗಜ್ಯೋತಿ ಬಸವಣ್ಣ ವೀರಶೈವರಿಗೇ ಬೇಡವಾದನೇ?

By Srinath
|
Google Oneindia Kannada News

Veerashaivas urged to follow Basavanna principles
ಮೈಸೂರು, ಜುಲೈ 13: ವೀರಶೈವರಲ್ಲಿ ಬಸವಣ್ಣನ ವಿಚಾರಧಾರೆಗಳನ್ನು ಆಚರಿಸುವಷ್ಟು ಮನೋಧರ್ಮ ಉಳಿದಿಲ್ಲ ಎಂದು ಕರ್ನಾಟಕ ಸಾಹಿತ್ಯ ಪರಿಷತ್‌ ಅಧ್ಯಕ್ಷ, ಶರಣ ಡಾ. ಸಿ. ವೀರಣ್ಣ ತುಂಬಾ ನೊಂದುಕೊಂಡು ನುಡಿದಿದ್ದಾರೆ.

ನಗರದ ರಾಜೇಂದ್ರ ಭವನದಲ್ಲಿ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಶರಣ ಸಂಸ್ಕೃತಿ ಮಾಲೆ 15 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಕೃತಿಗಳ ಪರಿಚಯ ಮಾಡಿಕೊಟ್ಟರು.

ಬಸವಣ್ಣನವರ ವಿಚಾರಗಳನ್ನು ಆಚರಿಸುವ ಮನೋಧರ್ಮ ವೀರಶೈವರಲ್ಲಿ ಉಳಿದಿಲ್ಲ. ಅಲ್ಲದೆ ವೀರಶೈವ ಧರ್ಮದಲ್ಲಿ ವೈಚಾರಿಕ ಪರಿಕಲ್ಪನೆ ಶೇ. 10ರಷ್ಟೂ ಇಲ್ಲ. ಎಲ್ಲಾ ಧರ್ಮಗಳು ಕುತೂಹಲದಲ್ಲಿ ಹುಟ್ಟುವಂತೆಯೇ ವೀರಶೈವ ಪರಂಪರೆಯು ಸಹ ಕುತೂಹಲದಲ್ಲಿ ಹುಟ್ಟಿ ಭಜನೆಯಲ್ಲಿ ಅಂತ್ಯ ಕಂಡಿದೆ.

ದೇವರ ಹುಡುಕಾಟದಲ್ಲಿ ತೊಡಗಿದ ಅನೇಕ ಧರ್ಮಗಳು ಕಡೆಗೆ ಮನುಷ್ಯನನ್ನೇ ದೇವರು ಎಂದು ಪೂಜಿಸಿರುವುದನ್ನು ನಾವು ಕಾಣುತ್ತೇವೆ. ಕೃಷ್ಣ, ರಾಮ, ಬುದ್ಧ, ಬಸವಣ್ಣ ಎಲ್ಲರೂ ಸಹ ಮನುಷ್ಯರೆ. ಆದರೆ ನಾವು ಅವರನ್ನು ದೇವರು ಎಂದು ಪೂಜಿಸುತ್ತಿದ್ದೇವೆ ಎಂದು ಹೇಳಿದರು.

ನಮ್ಮ ವಿದ್ವಾಂಸರು ಚರಿತ್ರೆಯನ್ನು ತಿರುಚುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ದೇವರದಾಸಿಮಯ್ಯ ಮತ್ತು ಜೇಡರದಾಸಿಮಯ್ಯ ಇಬ್ಬರೂ ಒಬ್ಬರೇ ಎಂದು ಹೇಳಲಾಗುತ್ತದೆ. ಆದರೆ ಅವರಿಬ್ಬರೂ ಬೇರೆಯವರು. ದೇವರದಾಸಿಮಯ್ಯ ವಚನಕಾರ. ಆದರೆ ಜೇಡರದಾಸಿಮಯ್ಯ ವಚನಕಾರನಲ್ಲ. ಅಲ್ಲದೆ ಬಸವಣ್ಣನನ್ನು ವಚನ ಕ್ರಾಂತಿಗೆ ಕರೆತಂದವರು ಮಡಿವಾಳ ಮಾಚಯ್ಯ ಮತ್ತು ಅಂಬಿಗರ ಚೌಡಯ್ಯ ಎಂಬುದನ್ನು ಅಲ್ಲಗಳೆಯಲಾಗದು ಎಂದು ತಿಳಿಸಿದರು.

English summary
Karnataka Sahitya Parishath president Dr. C. Veeranna said he is very much disappointed as Veerashaivas have no mind to follow and adopt Basavanna's principles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X